ಕೇವಲ ಅರ್ಧ ದಿನದಲ್ಲಿ ಸುರಿದ 15 ದಿನದ ಮಳೆ; ಸರ್ವನಾಶದ ಸುಳಿವು ಕೊಡ್ತಾ ರಣಮಳೆ!

ಬ್ರೆಜಿಲ್‌ನ ಸಾವೊ ಪೌಲೊ ಪ್ರಾಂತ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭೂಕುಸಿತ, ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೇವಲ 13 ಗಂಟೆಗಳಲ್ಲಿ ಸುರಿದ ಮಳೆಯಿಂದ ಭಾರೀ ಹಾನಿಯಾಗಿದ್ದು, ಜನರು ಆತಂಕದಲ್ಲಿದ್ದಾರೆ. ಕೆಲವೇ ತಿಂಗಳ ಹಿಂದೆ ಇದೇ ರೀತಿಯ ಪ್ರವಾಹದಲ್ಲಿ 80 ಜನರು ಸಾವನ್ನಪ್ಪಿದ್ದರು.

Share this Video
  • FB
  • Linkdin
  • Whatsapp

ಜಾಗತಿಕ ಮಟ್ಟದಲ್ಲಿ ನೆಮ್ಮದಿಯಾಗಿದ್ದ ನಾಡಿನಲ್ಲೀಗ ರಣಭೀಕರ ವಾತಾವರಣ ನಿರ್ಮಾಣವಾಗಿದೆ. ಮನೆಗಳು ಮುಳುಗಿಹೋಗಿವೆ. ಬದುಕು ಕೊಚ್ಚಿಹೋಗ್ತಾ ಇದೆ. ಜಸ್ಟ್ 13 ಗಂಟೆಗಳಲ್ಲಿ ಸರ್ವನಾಶ ಸೃಷ್ಟಿಸಿದ ಮಳೆ ಅದೆಂಥಾ ವಿಧ್ವಂಸ ನಿರ್ಮಿಸಿದೆ. ಆ ರಕ್ಕಸ ಮಳೆಯ ಜೊತೆಗೆ ಮಿಂಚಿನ ದಾಳಿಯೂ ತೀವ್ರವಾಗಿದೆ. ಅಲ್ಲಿ ಸೆರೆಯಾಗಿರೋ ಭೀಭತ್ಸ ದೃಶ್ಯಗಳು ಹೇಳಿದ ಭಯಂಕರ ಕಥೆ ಹೇಳುತ್ತಿವೆ.

ಬ್ರೆಜಿಲ್‌ನಲ್ಲಿ ಇಂತಹ ಪ್ರವಾಹವೇನೂ ಹೊಸದಲ್ಲ. ಅದೇ ಥರ, ರಣರಕ್ಕಸ ಮಳೆಯಾದಾಗ, ಭೂಕುಸಿತವಾಗಿ ನರಬಲಿ ಪಡೆಯೋದೂ ಹೊಸದಲ್ಲ. ಆದರೆ, ಈ ಸಲ ಸುರಿದಿರೋ ಮಳೆ, ಯಮರೂಪಿಯಾಗಿಯೇ ಕಾಡ್ತಾ ಇದೆ. ಬ್ರೆಜಿಲ್ ಸರ್ಕಾರಕ್ಕೂ ಕೂಡ, ಈ ಪ್ರಳಯ ರಾಕ್ಷಸನಿಂದ ಪಾರಾಗೋ ಮಾರ್ಗವೇ ಕಾಣದಂತಾಗಿದೆ. ಅದ್ಯಾಕೆ ಅನ್ನೋದರ ಪೂರ್ತಿ ವಿವರ ನಿಮ್ಮ ಮುಂದಿಡ್ತೀವಿ. ಬ್ರೆಜಿಲ್‌ನ ಸಾವೊ ಪೌಲೊ ಪ್ರಾಂತ್ಯದಲ್ಲಿ ಸಮುದ್ರದ ತೀರವಿದೆ. ಅಲ್ಲಿ ಮಳೆಯಾದರೆ ಹೊಸದಾಗಿ ಆಶ್ಚರ್ಯಪಡಬೇಕಿಲ್ಲ. ರಣಮಳೆ ಅವರಿಗೆ ಭಯಾನಕವೂ ಅಲ್ಲ. ಏಕೆಂದರೆ ಅಲ್ಲಿನ ಇತಿಹಾಸದಲ್ಲಿ ಇಂಥಾ ಎಷ್ಟೋ ಧಾರಾಕಾರ ಮಳೆ ಸುರಿದಿದೆ. ಆದರೆ, ಈಗ ಸುರಿದಿರೋ ಮಳೆ, ಸರ್ವನಾಶಕ್ಕೆ ಮುನ್ನುಡಿ ಬರೆದ ಹಾಗೆ ಕಾಣುತ್ತಿದೆ.

ಇಷ್ಟೆಲ್ಲಾ ಅನಾಹುತಗಳು ಸಂಭವಿಸಿರೋದು, ಜಸ್ಟ್ 48 ಗಂಟೆಗಳ ಮಹಾಮಳೆಯ ಪ್ರಭಾವದಿಂದ. ಆದರೆ ಇಷ್ಟಕ್ಕೇ ಈ ದುರಂತ ಕತೆ ಮುಗೀತು ಅಂದ್ಕೊಬೇಡಿ. ಇದರ ದಾರುಣ ಕತೆ ಇನ್ನೂ ಭೀಕರವಾಗಿದೆ. ಈ ಬ್ರೆಜಿಲ್ ಪದೇ ಪದೇ ವರುಣಾಸುರನ ಅಟ್ಟಹಾಸಕ್ಕೆ ವೇದಿಕೆಯಾಗಿಬಿಟ್ಟಿದೆ. ಕೆಲವೇ ತಿಂಗಳ ಹಿಂದೆ, ಇದೇ ಬ್ರೆಜಿಲ್‌ನಲ್ಲಿ ಹತ್ತಿರತ್ತಿರ 80 ಮಂದಿಯ ಜೀವ ನುಂಗಿತ್ತು ಈ ರಕ್ಕಸ ಪ್ರವಾಹ. ಈಗ ಸದ್ಯಕ್ಕೆ, ಜೀವ ಹಾನಿಯ ವರದಿಯಂತೂ ಆಗಿಲ್ಲ.. ಆದರೆ ಅಸ್ತವ್ಯಸ್ತವಾಗಿರೋ ಜೀವನ ಸದ್ಯಕ್ಕೆ ಸರಿಯಾಗೋ ಸುಳಿವೂ ಸಿಕ್ತಾ ಇಲ್ಲ.

ಒಟ್ಟಾರೆ, ಈ ಮಳೆಯ ರಣಾರ್ಭಟ ಯಾವಾಗ ಕುಗ್ಗುತ್ತೋ, ಯಾವಾಗ ಕಡಿಮೆಯಾಗುತ್ತೋ ಅಂತ ಅಲ್ಲಿನ ಜನ ಕಾಯುತ್ತಿದ್ದಾರೆ. ಇನ್ನೂ ಕೆಲವರು ಭೀಭತ್ಸ ಮಳೆ ಯಾರ ಪ್ರಾಣವೂ ತೆಗೆಯದಿದ್ದರೆ ಸಾಕು ಅಂತ ಮತ್ತಷ್ಟು ಜನ ಪ್ರಾರ್ಥನೆ ಮಾಡುತ್ತಿದ್ದಾರೆ. ಆದಷ್ಟು ಬೇಗ ಅಲ್ಲಿನ ಪರಿಸ್ಥಿತಿ, ಮೊದಲಿನಂತಾಗಲಿ ಎನ್ನುವುದು ನಮ್ಮ ಆಶಯವಾಗಿದೆ.

Related Video