ಇಸ್ರೇಲ್ ಮೇಲಿ ದಾಳಿ ಮಾಡಿ ಕೆಟ್ಟ ಹಮಾಸ್, ಓಡಿ ಹೋಗಲು ಗಡಿ ತೆರೆಯುವಂತೆ ಮನವಿ!
ಇಸ್ರೇಲ್ ದಾಳಿಗೆ ತತ್ತರಿಸಿದ ಗಾಜಾ ಇದೀಗ ಈಜಿಪ್ಟ್ ಸೇರಿದಂತೆ ಸುತ್ತಿಲಿನ ಮುಸ್ಲಿಂ ರಾಷ್ಟ್ರಗಳಿಗೆ ಗಡಿ ಓಪನ್ ಮಾಡುವಂತೆ ಮನವಿ ಮಾಡುತ್ತಿದೆ. ಗಾಜಾದಲ್ಲಿದ್ದರೆ ಇಸ್ರೇಲ್ ದಾಳಿಗೆ ಸಾವು ಖಚಿತ ಅನ್ನೋದು ಖಚಿತವಾಗಿದೆ. ಇತ್ತ ವಿಶ್ವಸಂಸ್ಥೆಗೂ ಆಹಾರ, ನೀರು, ವೈದ್ಯಕೀಯ ನೆರವು ನೀಡಲು ಸಾಧ್ಯವಾಗುತ್ತಿಲ್ಲ. ಬೆಂಬಲಕ್ಕೆ ನಿಂತಿದ್ದ ರಾಷ್ಟ್ರಗಳು ಇದೀಗ ಪ್ಯಾಲೆಸ್ತಿನ್ ಕೈಬಿಟ್ಟಿದೆ.
ಇಸ್ರೇಲ್ ಮೇಲೆ ದಾಳಿ ಮಾಡಿ ನರಮೇಧ ನಡೆಸಿದ ಹಮಾಸ್ ಉಗ್ರರು ಜಗತ್ತನ್ನೇ ಗೆದ್ದ ಖುಷಿಯಲ್ಲಿ ಮಲಗಿದ್ದರು. ಹಲವರನ್ನು ಒತ್ತೆಯಾಳಾಗಿಟ್ಟುಕೊಂಡು ವಿಕೃತ ಆನಂದ್ ಆನುಭವಿಸಿದ್ದರ. ಆದರೆ ಗಾಜಾದ ನಾಗರೀಕರಿಗೆ ದಾಳಿ ಎಚ್ಚರಿಕೆ ಕೊಟ್ಟು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದ ಇಸ್ರೇಲ್, ಪ್ರತಿ ದಾಳಿ ಆರಂಭಿಸಿತು. ಇದೀಗ 8ನೇ ದಿನ ಗಾಜಾ ಮೇಲೆ ದಾಳಿ ಮುಂದುವರಿಸಿದೆ. ಗಾಜಾದ ಎಲ್ಲಾ ಗಡಿಗಳನ್ನು ಇಸ್ರೇಲ್ ನಿರ್ಬಂಧಿಸಿದೆ. ಇದೀಗ ಹಮಾಸ್ ಸರ್ಕಾರ ಈಜಿಪ್ಟ್ ಬಳಿ ಗಡಿ ತೆರೆಯುವಂತೆ ಮನವಿ ಮಾಡುತ್ತಿದೆ. ಗಾಜಾದಿಂದ ಪಲಾಯನ ಮಾಡಿ ಜೀವ ಉಳಿಸಿಕೊಳ್ಳಲು ದಾರಿ ಹುಡುಕುತ್ತಿದೆ.