Asianet Suvarna News Asianet Suvarna News

Russia-Ukraine War: ನನ್ನ ಮಗನನ್ನು ಕರೆಸಿಕೊಳ್ಳಿ, ದಾವಣಗೆರೆಯಲ್ಲಿ ಪೋಷಕರ ಆಕ್ರಂದನ

ದಾವಣಗೆರೆಯ ವಿನಯ್ ಎಂಬ ವಿದ್ಯಾರ್ಥಿ ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಪೋಷಕರು ಕಂಗಾಲಾಗಿದ್ದಾರೆ. 'ಇಷ್ಟು ದಿನ ನನ್ನ ಮಗ ನಮಗೆ ಧೈರ್ಯ ಹೇಳುತ್ತಿದ್ದ. ಈಗ ನಮ್ಮನ್ನು ಕರೆಸಿಕೊಳ್ಳಿ ಎಂದು ಹೇಳುತ್ತಿದ್ದಾನೆ. ಅವರಿಗೆ ಊಟ-ತಿಂಡಿ ಏನೂ ಸಿಗುತ್ತಿಲ್ಲ. ಆದಷ್ಟು ಬೇಗ ನನ್ನ ಮಗನನ್ನು ಕರೆಸಿಕೊಳ್ಳಿ' ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ. 

First Published Mar 5, 2022, 4:36 PM IST | Last Updated Mar 5, 2022, 4:36 PM IST

ರಷ್ಯಾ -ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. 160 ಕ್ಕೂ ಹೆಚ್ಚು ಶಿಕ್ಷಣ ಕೇಂದ್ರಗಳು ಉಡೀಸಾಗಿದೆ. ಬಂಕರ್ ನಲ್ಲೇ ಸಾವಿರಾರು ಮಂದಿ ಆಶ್ರಯ ಪಡೆದಿದ್ಧಾರೆ. ಅನ್ನ, ನೀರು, ಯಾವುದೂ ಇಲ್ಲದೇ ಬಂಕರ್‌ನಲ್ಲಿ ಸಾವಿರಾರು ಮಂದಿ ಪರದಾಡುತ್ತಿದ್ದಾರೆ. ಮನೆ ಮುಂದೆ ಬಿಳುವ ಹಿಮದ ಹನಿಯೇ ನೀರಿಗೆ ಆಸರೆಯಾಗಿದೆ. ಕಳೆದೆರಡು ದಿನಗಳಿಂದ ಅನ್ನ, ನೀರಿಲ್ಲದೇ ಪರದಾಡುತ್ತಿದ್ದಾರೆ.

Russia Ukraine Crisis: ಉಕ್ರೇನ್ ಅಧ್ಯಕ್ಷರ ಹತ್ಯೆಗೆ ರಷ್ಯಾದ ಮೂರು ಯತ್ನ ವಿಫಲ

ದಾವಣಗೆರೆಯ ವಿನಯ್ ಎಂಬ ವಿದ್ಯಾರ್ಥಿ ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಪೋಷಕರು ಕಂಗಾಲಾಗಿದ್ದಾರೆ. 'ಇಷ್ಟು ದಿನ ನನ್ನ ಮಗ ನಮಗೆ ಧೈರ್ಯ ಹೇಳುತ್ತಿದ್ದ. ಈಗ ನಮ್ಮನ್ನು ಕರೆಸಿಕೊಳ್ಳಿ ಎಂದು ಹೇಳುತ್ತಿದ್ದಾನೆ. ಅವರಿಗೆ ಊಟ-ತಿಂಡಿ ಏನೂ ಸಿಗುತ್ತಿಲ್ಲ. ಆದಷ್ಟು ಬೇಗ ನನ್ನ ಮಗನನ್ನು ಕರೆಸಿಕೊಳ್ಳಿ' ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ. 

Video Top Stories