
ಹಮಾಸ್ ಉಗ್ರದಾಳಿಯಿಂದ ಇಸ್ರೇಲ್ ಪರಿಸ್ಥಿತಿ ಹೇಗಿದೆ? ಮಾಹಿತಿ ಬಿಚ್ಚಿಟ್ಟ ಇಸ್ರೇಲ್ ಕಾನ್ಸುಲ್ ಜನರಲ್!
ಹಮಾಸ್ ಉಗ್ರರ ಭೀಕರ ದಾಳಿಗೆ ಇಸ್ರೇಲ್ ತತ್ತರಿಸಿದೆ. ಇಸ್ರೇಲ್ ನಾಗರೀಕರು, ಮಹಿಳೆಯರು ಮಕ್ಕಳನ್ನು ಹತ್ಯೆ ಮಾಡಿದ್ದರೆ, ಹಲವರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಇಸ್ರೇಲ್‌ನ ಪರಿಸ್ಥಿತಿ, ಭಾರತೀಯರು, ಕನ್ನಡಿಗರು ಸ್ಥಿತಿಗತಿ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಸ್ಟುಡಿಯೋದಲ್ಲಿಇಸ್ರೇಲ್ ಕಾನ್ಸುಲ್ ಜನರಲ್ ಟ್ಯಾಮಿ ಬೆನ್‌ಹ್ಯಾಮ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು(ಅ.08) ಪ್ಯಾಲೆಸ್ತಿನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಗಾಜಾ ಪಟ್ಟಿಯಿಂದ ಹಮಾಸ್ ಉಗ್ರರು ನಡೆಸಿದ ದಾಳಿಗೆ ಇಸ್ರೇಲ್ ನಲುಗಿ ಹೋಗಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ನಾಗರೀಕರನ್ನು ಹತ್ಯೆ ಮಾಡಲಾಗಿದೆ. 600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹಲವರನ್ನು ಒತ್ತೆಯಾಳಗಿಟ್ಟುಕೊಂಡಿದ್ದಾರೆ. ಮಹಿಳೆಯರ ಶವದ ಬೆತ್ತಲೆ ಮರೆವಣಿಗೆ ನಡೆಯುತ್ತಿದೆ. ಉಗ್ರರ ಅಟ್ಟಹಾಸ ಮಟ್ಟಹಾಕಲು ಇಸ್ರೇಲ್ ಯುದ್ಧ ಘೋಷಿಸಿದೆ. ಸದ್ಯ ಇಸ್ರೇಲ್ ಪರಿಸ್ಥಿತಿ ಗಂಭೀರವಾಗಿದೆ. ಈ ಕುರಿತು ಇಸ್ರೇಲ್ ಕಾನ್ಸುಲ್ ಜನರ್ ಟ್ಯಾಮಿ ಬೆನ್‌ಹ್ಯಾಮ್ ಜೊತೆ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.