ರಷ್ಯಾ ಉಕ್ರೇನ್ ಯುದ್ಧ.. ರಾಶಿರಾಶಿ ಶವಗಳ ಸಾಮೂಹಿಕ ಅಂತ್ಯಸಂಸ್ಕಾರ

ರಷ್ಯಾ ಉಕ್ರೇನ್‌ ನಡುವಿನ ಯುದ್ಧ 16ನೇ ದಿನಕ್ಕೆ ಕಾಲಿಟ್ಟಿದ್ದು, ಉಕ್ರೇನ್‌ ರಾಜಧಾನಿ ಕೀವ್ ಮುಂದೆಯೇ ರಷ್ಯಾ ಸೇನೆ ಬಂದು ನಿಂತಿದೆ. ಆದರೆ ಕೀವ್‌ ಅನ್ನು ವಶಪಡಿಸಿಕೊಳ್ಳಲು ಉಕ್ರೇನಿಗರು ಇದುವರೆಗೆ ಬಿಟ್ಟಿಲ್ಲ.

Share this Video
  • FB
  • Linkdin
  • Whatsapp

ರಷ್ಯಾ ಉಕ್ರೇನ್‌ ನಡುವಿನ ಯುದ್ಧ 16ನೇ ದಿನಕ್ಕೆ ಕಾಲಿಟ್ಟಿದ್ದು, ಉಕ್ರೇನ್‌ ರಾಜಧಾನಿ ಕೀವ್ ಮುಂದೆಯೇ ರಷ್ಯಾ ಸೇನೆ ಬಂದು ನಿಂತಿದೆ. ಆದರೆ ಕೀವ್‌ ಅನ್ನು ವಶಪಡಿಸಿಕೊಳ್ಳಲು ಉಕ್ರೇನಿಗರು ಇದುವರೆಗೆ ಬಿಟ್ಟಿಲ್ಲ. ರಷ್ಯಾದ ಸಾಲು ಸಾಲು ಟ್ಯಾಂಕರ್‌ಗಳನ್ನು ಉಕ್ರೇನಿಗರು ಹಿಮ್ಮೆಟ್ಟಿಸುತ್ತಿದ್ದಾರೆ. ಆದರೆ ಅರಣ್ಯ ಪ್ರದೇಶಗಳಲ್ಲಿ ಅಡಗಿ ನಿಂತು ಉಕ್ರೇನಿ ಸೈನಿಕರು ವೀರಾವೇಶ ತೋರುತ್ತಿದ್ದಾರೆ. ಈ ಮಧ್ಯೆ ಉಕ್ರೇನ್‌ ನಗರಗಳು ಬಹುತೇಕ ಸ್ಮಶಾನಗಳಾಗಿವೆ. ಅಲ್ಲಲ್ಲಿ ಶವಗಳು ಬಿದ್ದಿದ್ದು, ಸಾಮೂಹಿಕ ಸಂಸ್ಕಾರ ಮಾಡಲಾಗುತ್ತಿದೆ. ಈ ಮಧ್ಯೆ ರಷ್ಯಾ ಹೆರಿಗೆ ಆಸ್ಪತ್ರೆಯೂ ಸೇರಿದಂತೆ ಮೂರು ಆಸ್ಪತ್ರೆಗಳ ಮೇಲೆ ರಷ್ಯಾ ದಾಳಿ ನಡೆಸಿದ್ದು, ರಷ್ಯಾ ರಕ್ತದಾಹಕ್ಕೆ ಗರ್ಭಿಣಿಯರು, ಮಕ್ಕಳು ವೃದ್ಧರು ಬಲಿಯಾಗಿದ್ದಾರೆ. 

Related Video