
Ukraine Crisis ಪುಟಿನ್ ಜೀವಕ್ಕಿದೆ ಅಪಾಯ, ಮೇ.9ಕ್ಕೆ ಯುದ್ಧ ಅಂತ್ಯಗೊಳಿಸಲು ರಷ್ಯಾ ಪ್ಲಾನ್!
- ರಷ್ಯಾ ಅಧ್ಯಕ್ಷನ ಹತ್ಯೆಗೆ ಮಹಾ ಸಂಚು, ಭಯದಲ್ಲಿ ಪುಟಿನ್
- ಮೇ.9ಕ್ಕೆ ಯುದ್ಧ ನಿಲ್ಲಿಸಲು ಮುಂದಾದ ರಷ್ಯಾ
- ಉಕ್ರೇನ್ ಗುಪ್ತಚರ ಇಲಾಖೆ ಬಹಿರಂಗ ಪಡಿಸಿದ ಸ್ಫೋಟಕ ಮಾಹಿತಿ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಸರಿಸುಮಾರು ಒಂದು ತಿಂಗಳು. ಮೂರೇ ದಿನದಲ್ಲಿ ಉಕ್ರೇನ್ ಕೈವಶ ಮಾಡಲು ಹೊರಟು ವ್ಲಾದಿಮಿರ್ ಪುಟಿನ್ ಲೆಕ್ಕಾಚಾರ ಉಲ್ಟಾ ಆಗಿದೆ. ಒಂದು ತಿಂಗಳು ಕಳೆದರೂ ಉಕ್ರೇನ್ ಮಂಡಿಯೂರಿಲ್ಲ. ಇದೀಗ ಪುಟಿನ್ ಹತ್ಯೆಗೆ ಸಂಚು ನಡೆದಿದೆ. ಜೀವಭಯದಲ್ಲಿರುವ ಪುಟಿನ್ ಮೇ.9ಕ್ಕೆ ಯುದ್ಧ ನಿಲ್ಲಿಸಲು ಪ್ಲಾನ್ ಮಾಡಿದ್ದಾರೆ ಅನ್ನೋ ಮಾಹಿತಿಯನ್ನು ಉಕ್ರೇನ್ ಗುಪ್ರಚರ ಇಲಾಖೆ ನೀಡಿದೆ.