ಚೀನಾದಲ್ಲಿ ಕೋವಿಡ್ ಸ್ಫೋಟ: ಬ್ರಿಟನ್‌ಗೆ ಅಪ್ಪಳಿಸಿದೆ ಹೊಸ ಕೋವಿಡ್ ತಳಿ
ಕೊರೋನಾ ತವರು ಚೀನಾದಲ್ಲಿ ಮತ್ತೆ ಸೋಂಕು ಸ್ಫೋಟಗೊಳ್ಳುತ್ತಿದ್ದು ಶನಿವಾರ ರಾಜಧಾನಿ ಬೀಜಿಂಗ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 43 ಕೇಸ್ ದಾಖಲಾಗಿದೆ.
ಬೀಜಿಂಗ್ (ಅ. 24): ಕೊರೋನಾ (CoronaVirus) ತವರು ಚೀನಾದಲ್ಲಿ ಮತ್ತೆ ಸೋಂಕು ಸ್ಫೋಟಗೊಳ್ಳುತ್ತಿದ್ದು ಶನಿವಾರ ರಾಜಧಾನಿ ಬೀಜಿಂಗ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 43 ಕೇಸ್ ದಾಖಲಾಗಿದೆ.
ಕೋವಿಡ್ ಬಗ್ಗೆ ಚೀನಾದಲ್ಲಿ ಈಗ ‘ಶೂನ್ಯ ಸಹಿಷ್ಣುತೆ’ (Zero Tolarance) ಇದೆ. ಹೀಗಾಗಿ ಗಡಿಗಳಲ್ಲಿ ನಿರ್ಬಂಧಗಳಿವೆ. ಕೇಸು ವರದಿಯಾದರೆ ತಕ್ಷಣವೇ ಲಾಕ್‌ಡೌನ್ (Lockdown) ಘೋಷಿಸಲಾಗುತ್ತದೆ. ವೈರಸ್ ಹಬ್ಬುತ್ತಿರುವ ಭಾಗಗಳಲ್ಲಿ ಶಾಲಾ-ಕಾಲೇಜುಗಳು, ಪ್ರವಾಸಿ ತಾಣಗಳು, ಚಿತ್ರಮಂದಿರಗಳು ಸೇರಿದಂತೆ ಮನರಂಜನೆ ಸ್ಥಳಗಳನ್ನು ಮುಚ್ಚಲಾಗಿದೆ. ಅಲ್ಲದೆ ಕೆಲ ಮನೆಗಳ ಕಾಂಪೌಂಡ್‌ಗಳ ಮೇಲೂ ನಿರ್ದಿಷ್ಟಲಾಕ್‌ಡೌನ್ ಹೇರಲಾಗಿದೆ.
ಚೀನಾದಲ್ಲಿ ಕೋವಿಡ್ ಸ್ಪೋಟ, ಭಾರೀ ಆತಂಕ: ವಿಮಾನ ರದ್ದು, ಶಾಲೆ ಬಂದ್!
ಬ್ರಿಟನ್‌ನಲ್ಲಿ ಕೊರೋನಾ ವೈರಸ್‌ನ ಮತ್ತೊಂದು ಎ.ವೈ 4.2 ಹೆಸರಿನ ಹೊಸ ತಳಿಯೊಂದು ಪತ್ತೆಯಾಗಿದೆ. ಇದರ ಪರಿಣಾಮ ಬ್ರಿಟನ್‌ನಲ್ಲಿ ಶುಕ್ರವಾರ ಒಂದೇ ದಿನ 52 ಸಾವಿರಕ್ಕೂ ಹೆಚ್ಚು ಮಂದಿಗೆ ವೈರಸ್ ವ್ಯಾಪಿಸಿದೆ. ಇದೇ ವರ್ಷದ ಜು.17ರ ಬಳಿಕ ಇದೇ ಮೊದಲ ಬಾರಿಗೆ ಬ್ರಿಟನ್‌ನಲ್ಲಿ ಈ ಪ್ರಮಾಣದ ವೈರಸ್ ಹಾವಳಿ ಕಂಡುಬಂದಿದೆ.