ಭಾರತದಲ್ಲಿರುವ ತನ್ನ ನಾಗರಿಕರ ಹಿಂದಕ್ಕೆ ಕರೆಸಿ ಕೊಳ್ಳಲು ಚೀನಾ ನಿರ್ಧಾರ!
ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಂದೂವರೆ ಲಕ್ಷದತ್ತ ಸಾಗುತ್ತಿರುವಂತೆ, ಭಾರತದಲ್ಲಿರುವ ತನ್ನ ನಾಗರಿಕರನ್ನು ಮರಳಿ ಕರೆಸಿಕೊಳ್ಳಲು ಚೀನಾ ಮುಂದಾಗಿದೆ.
ನವದೆಹಲಿ(ಮೇ.26): ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಂದೂವರೆ ಲಕ್ಷದತ್ತ ಸಾಗುತ್ತಿರುವಂತೆ, ಭಾರತದಲ್ಲಿರುವ ತನ್ನ ನಾಗರಿಕರನ್ನು ಮರಳಿ ಕರೆಸಿಕೊಳ್ಳಲು ಚೀನಾ ಮುಂದಾಗಿದೆ. ಭಾರತದಲ್ಲಿ ಕಷ್ಟಅನುಭವಿಸುತ್ತಿರುವ ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಉದ್ಯಮಿಗಳು ತವರಿಗೆ ಮರಳಲು ವಿಶೇಷ ವಿಮಾನದ ಟಿಕೆಟ್ ಕಾಯ್ದಿರಿಸಿಕೊಳ್ಳಿ ಎಂದು ಚೀನಾ ರಾಯಭಾರಿ ಕಚೇರಿ ವೆಬ್‌ಸೈಟ್‌ನಲ್ಲಿ ನೋಟಿಸ್ ಪ್ರಕಟಿಸಿದೆ. ಅಲ್ಲದೇ ಕ್ವಾರಂಟೈನ್ ನಿಯಮಗಳನ್ನು ಪಾಲಿಸಲು ಬದ್ದರಾಗಬೇಕು, ಆರೋಗ್ಯ ಸೂಚಿಯನ್ನು ಪಾಲಿಸಬೇಕು ಎಂದು ಷರತ್ತು ವಿಧಿಸಲಾಗಿದೆ. ಇಡೀ ವಿಶ್ವಕ್ಕೆಲ್ಲಾ ಸೋಂಕು ಹಬ್ಬಿಸಿದ, ಚೀನಾ ಇದೀಗ ತನ್ನ ನಾಗರಿಕರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವ್ಯಂಗ್ಯ ವ್ಯಕ್ತವಾಗಿದೆ.