ಜಸ್ಟಿನ್ ಟ್ರುಡೋಗೆ ಭಾರತದಲ್ಲಿ ಅವಮಾನ, ಕೆನಡಾದಲ್ಲಿ ವಿಪಕ್ಷಗಳ ಹೋರಾಟ
ಜಿ20 ಶೃಂಗಸಭೆಗೆ ಆಗಮಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದು ಕೆನಡಾ ವಿಪಕ್ಷಗಳನ್ನು ಕೆರಳಿಸಿದೆ. ಭಾರತ ಮತ್ತೆ ಕೆನಡಾ ಪ್ರಧಾನಿಗೆ ಅವಮಾನ ಮಾಡಿದೆ ಎಂದು ಹೋರಾಟ ಆರಂಭಿಸಿದೆ.
ನವದೆಹಲಿ(ಸೆ.12) ಜಿ20 ಶೃಂಗಸಭೆಗೆ ಆಗಮಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟುಡ್ರೋಗೆ ಖಡಕ್ ಎಚ್ಚರಿಕೆ ನೀಡಿದ ಘಟನೆ ಕೆನಡಾದಲ್ಲಿ ತೀವ್ರ ಹೋರಾಟಕ್ಕೆ ಕಾರಣವಾಗಿದೆ. ಖಲಿಸ್ತಾನಿ ಹೋರಾಟ, ಹಿಂಸೆಗೆ ಪ್ರಚೋದನೆ, ಉಗ್ರರ ಜೊತೆಗೆ ಲಿಂಕ್, ಕೆನಡಾ ಹಿಂದೂ ದೇವಸ್ಥಾನದ ಮೇಲೆ ದಾಳಿ, ಭಾರತೀಯ ರಾಯಭಾರ ಅಧಿಕಾರಿಗಳ ಟಾರ್ಗೆಟ್ ಮಾಡುತ್ತಿರುವ ಖಲಿಸ್ತಾನಿಗಳನ್ನು ನಿಯಂತ್ರಿಸಬೇಕು ಎಂದು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಕೆನಡಾ ಮಾಧ್ಯಮಗಳು, ವಿಪಕ್ಷಗಳು ಹೋರಾಟ ನಡೆಸುತ್ತಿದೆ. 2018ರ ಬಳಿಕ ಇದೀಗ ಮತ್ತೆ ಕೆನಡಾ ಪ್ರಧಾನಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.