
ಚೀನಾ ಉದ್ಧಟತನಕ್ಕೆ ಬುದ್ಧಿ ಕಲಿಸಲು ಭಾರತದ ಶ್ರೀ ಸಾಮಾನ್ಯನೇ ಸಾಕು!
ಚೀನಾ ಭಾರತಕ್ಕೀಗ ನೇರ ಸವಾಲೊಂದನ್ನು ಕೊಟ್ಟಿದೆ. ಈ ಸವಾಲಿಗೆ ಉತ್ತರ ಕೊಡೋದು ಒಂದೇ, ಭಾರತವನ್ನು ಆತ್ಮ ನಿರ್ಭರ ಮಾಡೋದು ಒಂದೇ. ಯಾಕಂದ್ರೆ ಅಮೆರಿಕಾದಂತಹ ದೈತ್ಯ ರಾಷ್ಟ್ರಕ್ಕೂ ಚೀನಾಕ್ಕೆ ಬುದ್ದಿ ಹೇಳೋದು ಕಷ್ಟದ ಕೆಲಸವಾಗಿದೆ. ಅದರೆ ಭಾರತಕ್ಕೆ ಇದು ಸುಲಭದ ಕೆಲಸ. ಚೀನಾದ ಉದ್ಧಟತನಕ್ಕೆ ಸೈನಿಕರ ಬಂದೂಕಿನ ಸದ್ದು, ರಾಜತಾಂತ್ರಿಕ ನಿಲುವು ಪಾಠ ಕಲಿಸಬೇಕಿಲ್ಲ. ನಮ್ಮಂತ ನಿಮ್ಮಂಥ ಶ್ರೀ ಸಾಮಾನ್ಯರೂ ಸಾಕು ಪಾಠ ಕಲಿಸೋಕೆ. ಹೇಗೆ ಗೊತ್ತಾ?
ಬೆಂಗಳೂರು (ಜೂ. 10): ಚೀನಾ ಭಾರತಕ್ಕೀಗ ನೇರ ಸವಾಲೊಂದನ್ನು ಕೊಟ್ಟಿದೆ. ಈ ಸವಾಲಿಗೆ ಉತ್ತರ ಕೊಡೋದು ಒಂದೇ, ಭಾರತವನ್ನು ಆತ್ಮ ನಿರ್ಭರ ಮಾಡೋದು ಒಂದೇ. ಯಾಕಂದ್ರೆ ಅಮೆರಿಕಾದಂತಹ ದೈತ್ಯ ರಾಷ್ಟ್ರಕ್ಕೂ ಚೀನಾಕ್ಕೆ ಬುದ್ದಿ ಹೇಳೋದು ಕಷ್ಟದ ಕೆಲಸವಾಗಿದೆ. ಅದರೆ ಭಾರತಕ್ಕೆ ಇದು ಸುಲಭದ ಕೆಲಸ. ಚೀನಾದ ಉದ್ಧಟತನಕ್ಕೆ ಸೈನಿಕರ ಬಂದೂಕಿನ ಸದ್ದು, ರಾಜತಾಂತ್ರಿಕ ನಿಲುವು ಪಾಠ ಕಲಿಸಬೇಕಿಲ್ಲ. ನಮ್ಮಂತ ನಿಮ್ಮಂಥ ಶ್ರೀ ಸಾಮಾನ್ಯರೂ ಸಾಕು ಪಾಠ ಕಲಿಸೋಕೆ. ಹೇಗೆ ಗೊತ್ತಾ ಅದೇ ಬಾಯ್‌ಕಾಟ್ ಚೀನಾ.
ನಮ್ಮ ಉತ್ಪನ್ನ ಬಹಿಷ್ಕಾರ ಭಾರತೀಯರಿಗೆ ಅಸಾಧ್ಯ: ಚೀನಾ ಕುಹಕ!
ಚೀನಾದ ವಸ್ತುಗಳನ್ನು ಸಂಪೂರ್ಣವಾಗಿ ಬ್ಯಾನ್ ಮಾಡೋದು ಕಷ್ಟ. ಚೀನಾದ ವಸ್ತುಗಳಿಗೆ ಭಾರತವೇ ಅತೀ ದೊಡ್ಡ ಮಾರುಕಟ್ಟೆ. ಚೀನಾದ ವಸ್ತುಗಳು ಹೆಚ್ಚು ಮಾರಾಟವಾಗೋದು ಭಾರತದಲ್ಲಿಯೇ. ಇದನ್ನೇ ಮುಂದಿಟ್ಟುಕೊಂಡು ಚೀನಾ ಉದ್ಧಟತನ ತೋರಿಸುತ್ತಿದೆ. ಹಾಗಾದ್ರೆ ಚೀನಾದ ವಸ್ತುಗಳನ್ನು ಬಾಯ್‌ಕಾಟ್ ಮಾಡೋದು ಹೇಗೆ? ಇಲ್ಲಿದೆ ನೋಡಿ!