ಇಸ್ರೇಲ್‌ ಯುದ್ಧಭೂಮಿಯಿಂದ ವರದಿಗಾರಿಕೆ ನಡುವೆ ತೂರಿ ಬಂತು ಹಮಾಸ್ ಉಗ್ರರ ರಾಕೆಟ್!

ಹಮಾಸ್ ಉಗ್ರ ನೆಲೆಬೀಡಾಗಿರುವ ಗಾಜಾ ಗಡಿಯತ್ತ ವರದಿಗಾರಿಕೆಗೆ ತೆರಳುತ್ತಿದ ಏಷ್ಯಾನೆಟ್ ಸುವರ್ಣನ್ಯೂಸ್ ತಂಡಕ್ಕೆ ರಾಕೆಟ್ ದಾಳಿ ಪ್ರತ್ಯಕ್ಷ  ಅನುಭವವವಾಗಿದೆ. ಹಮಾಸ್ ಉಗ್ರರು ಲಾಂಚ್ ಮಾಡಿದ ರಾಕೆಟ್ ಹಾಗೂ ಇಸ್ರೇಲ್ ಗಡಿ ಭಾಗದಲ್ಲಿನ ಪರಿಸ್ಥಿತಿ ಕುರಿತು ಗ್ರೌಂಡ್ ರಿಪೋರ್ಟ್ ಇಲ್ಲಿದೆ.

First Published Oct 15, 2023, 5:56 PM IST | Last Updated Oct 15, 2023, 5:56 PM IST

ಇಸ್ರೇಲ್(ಅ.15) ಇಸ್ರೇಲ್ ಹಾಗೂ ಪ್ಯಾಲೆಸ್ತಿನ ಸಂಘರ್ಷ ಹೆಚ್ಚಾಗುತ್ತಿದೆ. ಹಮಾಸ್ ಉಗ್ರರು ನಡೆಸಿದ ನರಮೇಧಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾದ ಮೇಲೆ ಮುಗಿಬಿದ್ದಿದೆ. ನಿರಂತರ ದಾಳಿಗಳು ಎರಡೂ ಕಡೆಯಿಂದ ನಡೆಯುತ್ತಿದೆ. ಈ ಯುದ್ಧಭೂಮಿಯಿಂದ ಏಷ್ಯಾನೆಟ್ ಸುವರ್ಣನ್ಯೂಸ್ ಗ್ರೌಂಡ್ ರಿಪೋರ್ಟ್ ನೀಡುತ್ತಿದೆ.  ಗಾಜಾ ಗಡಿಗೆ ತೆರಳುತ್ತಿದ್ದಂತೆ ಹಮಾಸ್ ಉಗ್ರರು ಸಿಡಿಸಿದ ರಾಕೆಟ್ ತೂರಿ ಬಂದ ಭಯಾನಕ ಘಟನೆಗಳು ನಡೆದಿದೆ.  ಇಸ್ರೇಲ್ ಹಾಗೂ ಗಾಜಾ ಗಡಿ ಸಮೀಪದ ಹಳ್ಳಿಯಲ್ಲಿ ರಾಕೆಟ್ ದಾಳಿ, ಸೈರೆನ್ ಶಬ್ಧದ ಕುರಿತು ಅಜಿತ್ ಹನಮಕ್ಕನವರ್ ನೀಡಿದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.