
ಅಮೇರಿಕಾ ಲಾಸ್ ಏಂಜಲೀಸ್ ಕಾಳ್ಗಿಚ್ಚು ಇನ್ನೂ ನಿಂತಿಲ್ಲ; 76 ಜೀವಗಳನ್ನು ಬಲಿ ಪಡೆದ ಭಯಾನಕ ಬೆಂಕಿ!
ಒಂದೇ ಕಟ್ಟಡದಲ್ಲಿ 76 ಜನರನ್ನು ಬಲಿ ಪಡೆದ ಭಯಾನಕ ಬೆಂಕಿಯ ಘಟನೆ ನಡೆದಿದೆ. ಈ ದುರಂತದ ಹಿಂದಿನ ಕಾರಣಗಳನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ. ಟರ್ಕಿ ಮತ್ತು ಅಮೆರಿಕದಲ್ಲೂ ಇದೇ ರೀತಿಯ ಅಗ್ನಿ ದುರಂತಗಳು ಸಂಭವಿಸಿವೆ.
ಅದ್ಯಾಕೋ ಏನೋ, ಇಡೀ ಭೂಮಂಡಲಕ್ಕೇ ಅಗ್ನಿಭೀತಿ ಎದುರಾದ ಹಾಗಿದೆ.. ಮೊನ್ನೆಯೆಲ್ಲಾ ಅಮೆರಿಕಾದಲ್ಲಿ ಅಗ್ನಿಪ್ರಳಯವೇ ಆಯ್ತು.. ಹತ್ತಾರು ಜನರ ಆಹುತಿ ಪಡೀತು.. ಕೆಲವೇ ದಿನಗಳ ಕೆಳಗೆ, ಕುಂಭಮೇಳದಲ್ಲೂ ಬೆಂಕಿ ಕಾಣಿಸಿಕೊಳ್ತು.. ದೇವರ ದಯೆ, ಪ್ರಾಣಾಪಾಯ ಎದುರಾಗ್ಲಿಲ್ಲ. ಆದರೆ, ಅದೊಂದು ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ, ಕೆಲವೇ ನಿಮಿಷಗಳಲ್ಲಿ ಬಲಿಪಡೆದಿದ್ದು, 76 ಜೀವಗಳನ್ನ.. ಅಷ್ಟಕ್ಕೂ ಆ ಕಟ್ಟಡಕ್ಕೆ ಕಂಟಕ ಎದುರಾಗಿದ್ದೇಕೆ? ಆ ಭಯಾನಕ ಸಂಗತಿನಾ ನಿಮ್ಮ ಮುಂದೆ ತೆರೆದಿಡ್ತೀವಿ ನೋಡಿ.
ಈ ತಪ್ಪುಗಳ ಹಿಂದಿರೋದು ಯಾರು ಅಂತ ಪತ್ತೆ ಹಚ್ಚೋದಕ್ಕೆ ಈಗ ತನಿಖೆ ಶುರುವಾಗಿದೆ.. ಇನ್ನು ಕೆಲವೇ ಗಂಟೆಗಳಲ್ಲಿ, 76 ಮಂದಿ ಪ್ರಾಣಕ್ಕೆ ಕಂಟಕ ತಂದವರಿಗೆ ಶಿಕ್ಷೆನೂ ಆಗತ್ತೆ.. ಅಲ್ಲಿಗೆ ಈ ಕತೆ ಮುಗಿಬೋದೋ ಏನೋ. ಆದ್ರೆ ಇನ್ನೊಂದು ಕತೆ ಮಾತ್ರ ಮುಗಿಯೋ ಸಣ್ಣ ಸುಳಿವೂ ಸಿಕ್ತಾ ಇಲ್ಲ. ಟರ್ಕಿಯಲ್ಲಿ ಭುಗಿಲೆದ್ದ ಬೆಂಕಿ, 76 ಜನರ ಪ್ರಾಣವನ್ನೇ ತೆಗೆದುಬಿಡ್ತು.. ಚಳಿಗಾಲದ ರಜೆಲಿ ಸಂಭ್ರಮಿಸೋಕೆ ಬಂದವರು, ಸ್ಮಶಾನ ಸೇರೋ ಹಾಗಾಯ್ತು. ಒಂದೇ ಕಟ್ಟಡದಲ್ಲಿದ್ದವರನ್ನ ಬರ್ಬರವಾಗಿ ಆ ಬೆಂಕಿ ಬಲಿಪಡೆದು ಮಾಯವಾಯ್ತು. ಆದ್ರೆ ಇನ್ನೊಂದು ಕಡೆ ಅಂಥದ್ದೇ ಬೆಂಕಿ, ದಿನಗಳುರಿಳಿದರೂ ಕಡಿಮೆಯಾಗ್ತಾ ಇಲ್ಲ. ಅಟ್ಟಹಾಸ ನಿಲ್ಲಿಸಿಲ್ಲ.
ಟರ್ಕಿಯಲ್ಲಿ ಬೆಂಕಿಯ ಅಬ್ಬರ ಹೇಗಿದೆ ಅಂತ ನೋಡಿದ್ದಾಯ್ತು.. ಅಮೆರಿಕಾದಲ್ಲಿ ಅಗ್ನಿಯ ಆರ್ಭಟ ಹೇಗಿದೆ ಅಂತಲೂ ನೋಡಿದ್ದಾಯ್ತು.. ಆದ್ರೆ ನೀವು ನೋಡಲೇಬೇಕಾದ ಮತ್ತೊಂದು ಸಂಗತಿ ಇದೆ. ಜಗತ್ತಿಗೆ ಗಂಡಾಂತರ ಎದುರಾಗಿದೆ.. ಪ್ರಪಂಚದ ಯಾವ್ದೋ ಮೂಲೆಯಲ್ಲಿ ಎಂಥದ್ದೋ ಒಂದು ಅನಾಹುತ ಆಗ್ತಲೇ ಇದೆ.. ಅದರಿಂದ ದುರಂತಗಳೂ ಆಗ್ತಾ ಇದಾವೆ.. ಅಂಥದ್ದೆ ದುರಂತ, ಭಾರತದಲ್ಲೂ ಆಯ್ತು.