ಅಗ್ನಿಕುಂಡದಲ್ಲಿ ಅಮೆರಿಕಾ ವಿಲವಿಲ! ಗಂಡಾಂತರ ಹೆಚ್ಚಿಸಿದ ಮತ್ತೊಂದು ಹೊಸ ಕಾಳ್ಗಿಚ್ಚು!

ಅಮೆರಿಕದ ಹಾಲಿವುಡ್‌ನಲ್ಲಿ ಎರಡು ವಾರಗಳಿಂದ ಕಾಳ್ಗಿಚ್ಚು ನಿಯಂತ್ರಣ ತಪ್ಪಿದೆ. ಬೆಂಕಿ ನಂದಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದ್ದರೂ, ಅದು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದೀಗ ಮತ್ತೊಂದು ಹೊಸ ಕಾಳ್ಗಿಚ್ಚು ಶುರುವಾಗಿದೆ.

Share this Video
  • FB
  • Linkdin
  • Whatsapp

ಅಮೆರಿಕಾದ ಒಂದು ಭಾಗವೇ ಭಸ್ಮವಾಗೋ ಲಕ್ಷಣಗಳು ಕಾಣಿಸುತ್ತಿವೆ. ಹಾಲಿವುಡ್‌ನ ಹೃದಯವೇ ಆಗಿದ್ದ ಆ ನೆಲದ ಮೇಲೆ, ಈಗ ಕಾಳ್ಗಿಚ್ಚಿನ ರಣನರ್ತನ ಶುರುವಾಗಿದೆ. ಎರಡು ವಾರಗಳೇ ಕಳೆದರೂ, ಇನ್ನೂ ಆ ಬೆಂಕಿ ಶಾಂತವಾಗಿಲ್ಲ. ಶಾಂತವಾಗೋದು ಬಿಡಿ, ಅದನ್ನ ನಿಯಂತ್ರಿಸೋಕೂ ಸಾಧ್ಯವಾಗುತ್ತಿಲ್ಲ.. ಅಷ್ಟೇ ಅಲ್ಲ, ಈಗೀಗ ತಾನೆ ಕಂಟ್ರೋಲಿಗೆ ಬಂದ ಹಾಗೆ ಕಾಣುಸ್ತಿದ್ದ ಬೆಂಕಿ, ಈಗ ಮತ್ತೊಂದು ಕಡೆ ಭುಗಿಲೆದ್ದಿದೆ. ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..

ಅಮೇರಿಕಾದ ಹಾಲಿವುಡ್‌ನ ಅತಿಭೀಕರ ಅಗ್ನಿಪ್ರಮಾದದ ಭಯಾನಕ ದೃಶ್ಯಗಳು ಎಂಥವರಿಗೂ ಜೀವ ಭಯ ಹುಟ್ಟಿಸಿಬಿಡುತ್ತವೆ. ಇಂಥಾ ಮತ್ತಷ್ಟು ಭೀಭತ್ಸ ದೃಶ್ಯಗಳು ವರದಿಯಾಗುತ್ತಲೇ ಇವೆ. ಫೈರ್ ಇಂಜಿನ್, ಪ್ಲೇನ್, ಜೆಟ್, ಏರ್ ಕ್ರಾಫ್ಟ್ ಸೇರಿದ ಒಂದಲ್ಲಾ ಎರಡಲ್ಲಾ ಅಮೆರಿಕಾದಲ್ಲಿ ಬೆಂಕಿ ನಂದಿಸೋಕೆ ಇರುವ ಎಲ್ಲ ಪರಿಕರಗಳನ್ನು ಅಲ್ಲಿ ಬಳಕೆ ಮಾಡಲಾಗುತ್ತಿದೆ. ಆದರೆ, ಅದ್ಯಾವುದಕ್ಕೂ ಬೆಂಕಿ ಮಾತ್ರ ತಗ್ಗೋದೇ ಇಲ್ಲ ಅಂತ ಮಿಕ್ಕಿಮೀರಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಅದರ ಭೀಕರತೆ ಹೇಗಿದೆ ಅನ್ನೋದರ ಕತೆ ಇಲ್ಲಿದೆ ನೋಡಿ..

ಅಮೇರಿಕಾ ತನ್ನಲ್ಲಿರುವ ಎಲ್ಲ ಬೆಂಕಿ ನಂದಿಸುವ ಪ್ರಯೋಗ ನಡೆಸಿದರೂ, ಅಗ್ನಿ ರಾಕ್ಷಸ ಮಾತ್ರ ತನ್ನ ಅಟ್ಟಹಾಸ ಕಡಿಮೆ ಮಾಡಿಕೊಳ್ಳೋ ಲಕ್ಷಣಗಳು ಕಾಣಿಸುತ್ತಿಲ್ಲ. ಇದನ್ನೆಲ್ಲಾ ನೋಡ್ತಾ ಇರೋ, ಹೊಸ ಅಮೆರಿಕಾ ಅಧ್ಯಕ್ಷ ಮಾತ್ರ ಅಧಿಕಾರ ಸ್ವೀಕಾರ, ಹೊಸ ಕಾಯ್ದೆಗಳ ಜಾರಿಯಲ್ಲಿ ನಿರತರಾಗಿದ್ದಾರೆ. ಆದ್ದರಿಂದ ಅಮೇರಿಕಾದ ಈ ಪ್ರದೇಶ ಮಾತ್ರ ಅಗ್ನಿಕುಂಡದ ಹಾಗೆ ಬದಲಾಗಿ ಬಿಟ್ಟಿದೆ.

Related Video