
ಯುದ್ಧಭೂಮಿಗೆ ಅಮೆರಿಕಾ ಎಂಟ್ರಿ! ನಿಜವಾಗುತ್ತಾ ಟ್ರಂಪ್ ನುಡಿದಿರೋ ಯುದ್ಧ ಭವಿಷ್ಯ?
ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ, ಯಾವ ತಿರುವು ಪಡೆಯಬಾರದಿತ್ತೋ, ಅದೇ ತಿರುವು ಪಡೆದುಕೊಂಡಿದೆ.. ಈ ಇಬ್ಬರ ನಡುವಿನ ಗುದ್ದಾಟ, ಈಗ ಯುದ್ಧವಾಗಿ ಬದಲಾಗಿದೆ..
ಇಸ್ರೇಲ್ ಇರಾನ್ ಮಧ್ಯೆ ದಾಳಿ, ದಾಳಿಗೆ ಪ್ರತಿದಾಳಿ ನಡೀತಿತ್ತು.. ಆದ್ರೆ ಈಗ ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧಕ್ಕೆ ಮುನ್ನುಡಿ ಬರೆಯಬಹುದಾದ ಸಂಗ್ರಾಮವೊಂದು ಉದ್ಭವಿಸಿದೆ.. ಇರಾನ್, ನೇರಾನೇರ ಯುದ್ಧಕ್ಕೆ ಸನ್ನದ್ಧವಾಗಿಬಿಟ್ಟಿದೆ.. ಆದ್ರೆ, ಅದನ್ನ ಮಣಿಸೋಕ್ಕೆ ಪಣತೊಟ್ಟಿರೋ ಇಸ್ರೇಲ್, ಇರಾನ್ ಸೋಲಿಸೋದಕ್ಕಿಂತಾ ಹೆಚ್ಚಾಗಿ, ಇನ್ನೊಂದು ಟಾರ್ಗೆಟ್ ಇಟ್ಕೊಂಡಿದೆ.. ಆ ಟಾರ್ಗೆಟ್ ಬಗ್ಗೆ ಕೇಳಿನೇ ಜಗತ್ತಿನ ಮೈ ಒಂದು ಕ್ಷಣ ಕಂಪಿಸಿದೆ.. ಆ ಟಾರ್ಗೆಟ್ ಹೆಸರು, ಅಯತೊಲ್ಲಾ ಅಲಿ ಖಮೇನಿ.