Asianet Suvarna News Asianet Suvarna News

ತಾಯ್ನಾಡಿಗೆ ಮರಳಿದ ಅಪ್ಘಾನಿಸ್ತಾನದ ಮೊದಲ ಹಿಂದೂ ಸಂಸದೆ!

Aug 22, 2021, 2:33 PM IST

ಕಾಬೂಲ್(ಆ.22): ತಾಲಿಬಾನಿಗಳ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಭಾರತಕ್ಕೆ ಹಲವರನ್ನು ಏರ್‌ಲಿಫ್ಟ್‌ ಮೂಲಕ ಹಿಂದಕ್ಕೆ ಕರೆತರಲಾಗಿದೆ. ಈ ಏರ್‌ಲಿಫ್ಟ್‌ ಮೂಲಕ ಅಪ್ಘಾನಿಸ್ತಾನದ ಮೊದಲ ಹಿಂದೂ ಸಂಸದೆಯನ್ನೂ ತಾಯ್ನಾಡಿಗೆ ಕರೆತರಲಾಗಿದೆ. 

ಪಂಜಾಬ್ ಮೂಲದ ಅನಾರ್ಕಲಿ ಕೌರ್ ಹೊನರಿಯಾರ್ ಸದ್ಯ ಭಾರತಕ್ಕೆ ತಲುಪಿದ್ದಾರೆ. 2006ರಲ್ಲಿ ಅಪ್ಘಾನ್‌ ಸರ್ಕಾರದಲ್ಲಿ ಇವರು ಸಂಸದೆಯಾಗಿ ಆಯ್ಕೆಯಾಗಿದ್ದರು. ಸಿ 17 ಮೂಲಕ ಅವರು ಭಾರತಕ್ಕೆ ಮರಳಿದ್ದಾರೆ. ಇದೇ ವೇಳೆ ಭಾರತ ಸರ್ಕಾರಕ್ಕೆ ಅವರು ಧನ್ಯವಾದವನ್ನೂ ತಿಳಿಸಿದ್ದಾರೆ.