Asianet Suvarna News Asianet Suvarna News

ಅಷ್ಘಾನಿಸ್ತಾನ ಸರ್ಕಾರಕ್ಕೆ ನೀಡಿದ ಶಸ್ತ್ರಾಸ್ತ್ರಗಳೆಲ್ಲಾ ತಾಲಿಬಾನಿಗಳ ಪಾಲು!

ತಾಲಿಬಾನಿಗಳನ್ನು ಸೋಲಿಸಲು ಅಮೆರಿಕ ಅಷ್ಘಾನಿಸ್ತಾನ ಸೇನೆಗೆ ನೀಡಿದ್ದ ಆಧುನಿಕ ಶಸ್ತ್ರಾಸ್ತ್ರಗಳು ಈಗ ತಾಲಿಬಾನಿಗಳ ವಶವಾಗಿದೆ. ಅಮೆರಿಕ ನೀಡಿದ್ದ 2000 ಸಶಸ್ತ್ರ ವಾಹನಗಳು, 40 ಹೆಲಿಕಾಪ್ಟರ್‌ಗಳು, ಸ್ಫೋಟಕಗಳು, ಆಧುನಿಕ ಮಶಿನ್‌ ಗನ್‌ಗಳನ್ನು ತಾಲಿಬಾನ್‌ ವಶಪಡಿಸಿಕೊಂಡಿದೆ. ಹೀಗಾಗಿ ಕಳೆದ ಬಾರಿಗಿಂತ ತಾಲಿಬಾನಿಗಳು ಈ ಬಾರಿ ಹೆಚ್ಚು ಹಾನಿ ಮಾಡಬಲ್ಲ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಮತ್ತಷ್ಟು ಅಪಾಯಕಾರಿಯಾಗಿ ಹೊರಹೊಮ್ಮವು ಭೀತಿ ಎದುರಾಗಿದೆ.

First Published Aug 21, 2021, 12:16 PM IST | Last Updated Aug 21, 2021, 12:16 PM IST

ಕಾಬೂಲ್‌(ಆ.21): ತಾಲಿಬಾನಿಗಳನ್ನು ಸೋಲಿಸಲು ಅಮೆರಿಕ ಅಷ್ಘಾನಿಸ್ತಾನ ಸೇನೆಗೆ ನೀಡಿದ್ದ ಆಧುನಿಕ ಶಸ್ತ್ರಾಸ್ತ್ರಗಳು ಈಗ ತಾಲಿಬಾನಿಗಳ ವಶವಾಗಿದೆ. ಅಮೆರಿಕ ನೀಡಿದ್ದ 2000 ಸಶಸ್ತ್ರ ವಾಹನಗಳು, 40 ಹೆಲಿಕಾಪ್ಟರ್‌ಗಳು, ಸ್ಫೋಟಕಗಳು, ಆಧುನಿಕ ಮಶಿನ್‌ ಗನ್‌ಗಳನ್ನು ತಾಲಿಬಾನ್‌ ವಶಪಡಿಸಿಕೊಂಡಿದೆ. ಹೀಗಾಗಿ ಕಳೆದ ಬಾರಿಗಿಂತ ತಾಲಿಬಾನಿಗಳು ಈ ಬಾರಿ ಹೆಚ್ಚು ಹಾನಿ ಮಾಡಬಲ್ಲ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಮತ್ತಷ್ಟು ಅಪಾಯಕಾರಿಯಾಗಿ ಹೊರಹೊಮ್ಮವು ಭೀತಿ ಎದುರಾಗಿದೆ.

2003-2016ರ ಅವಧಿಯಲ್ಲಿ ಅಮೆರಿಕ ಅಷ್ಘಾನಿಸ್ತಾನಕ್ಕೆ 208 ಯುದ್ಧ ವಿಮಾನಗಳನ್ನು ನೀಡಿದೆ. ಆಫ್ಘನ್‌ ಸೇನೆ ತಾಲಿಬಾನಿಗಳಿಗೆ ಶರಣಾಗುವ ಮೂಲಕ 2 ಸಾವಿರಕ್ಕೂ ಹೆಚ್ಚು ಮಿಲಿಟರಿ ವಾಹನಗಳು ತಾಲಿಬಾನಿಗಳಿಗೆ ಸುಲಭವಾಗಿ ದೊರಕಿದೆ. ಇದರಲ್ಲಿ ಯುಎಚ್‌-60 ಬ್ಲಾಕ್‌ ಹಾಕ್ಸ್‌, ಎ-29 ಸೂಪರ್‌ ಟ್ಯುಕಾನೋ ಸೇರಿದಂತೆ ಸುಸಜ್ಜಿತವಾದ 40 ಯುದ್ಧ ವಿಮಾನಗಳು ಹಾಗೂ ಸ್ಕಾ್ಯನ್‌ ಈಗಲ್‌ ಮಿಲಿಟರಿ ಡ್ರೋನ್‌ಗಳು ಸೇರಿವೆ.