Russia Ukraine War: ರಷ್ಯಾ ದಾಳಿಯಲ್ಲಿ ಉಕ್ರೇನ್‌ನ 137 ಸೈನಿಕರು ಸಾವು

ಮೊದಲ ದಿನವೇ ಎರಡೂ ದೇಶಗಳಲ್ಲಿ ಭಾರೀ ಸಾವು-ನೋವು ಮತ್ತು ಸಾಕಷ್ಟು ಪ್ರಮಾಣದ ಸೇನಾ ಆಸ್ತಿಗಳಿಗೆ ಹಾನಿಯಾಗಿದೆ. ರಷ್ಯಾ ದಾಳಿಯಲ್ಲಿ ಉಕ್ರೇನ್‌ನ 137 ಸೈನಿಕರು ಹಾಗೂ 18 ನಾಗರಿಕರು ಸೇರಿ 58 ಜನರು ಸಾವನ್ನಪ್ಪಿದ್ದಾರೆ. 

First Published Feb 25, 2022, 3:16 PM IST | Last Updated Feb 25, 2022, 3:16 PM IST

ಮೊದಲ ದಿನವೇ ಎರಡೂ ದೇಶಗಳಲ್ಲಿ ಭಾರೀ ಸಾವು-ನೋವು ಮತ್ತು ಸಾಕಷ್ಟು ಪ್ರಮಾಣದ ಸೇನಾ ಆಸ್ತಿಗಳಿಗೆ ಹಾನಿಯಾಗಿದೆ. ರಷ್ಯಾ ದಾಳಿಯಲ್ಲಿ ಉಕ್ರೇನ್‌ನ 137 ಸೈನಿಕರು ಹಾಗೂ 18 ನಾಗರಿಕರು ಸೇರಿ 58 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 11 ವಾಯುನೆಲೆ ಸೇರಿ ಉಕ್ರೇನ್‌ನ 74 ಸೇನಾನೆಲೆಗಳನ್ನು ಧ್ವಂಸಗೊಳಿಸಿದ್ದೇವೆ ಎಂದು ರಷ್ಯಾ ಹೇಳಿದೆ. ಮತ್ತೊಂದೆಡೆ ಉಕ್ರೇನ್‌ ತಾನು ರಷ್ಯಾದ 8 ವಿಮಾನಗಳನ್ನು ಹೊಡೆದುರುಳಿಸಿದ್ದು, ದಾಳಿಯಲ್ಲಿ ರಷ್ಯಾದ 50 ಯೋಧರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ರಷ್ಯಾದ ಈ ಅಪ್ರಚೋದಿತ ದಾಳಿಯನ್ನು ವಿಶ್ವ ಸಮುದಾಯ ಕಟುನುಡಿಗಳಲ್ಲಿ ಖಂಡಿಸಿದೆ. ಆದರೂ ಹಠ ಬಿಡದೆ ದಾಳಿ ಮುಂದುವರೆಸಿರುವ ರಷ್ಯಾ, ಕೇವಲ ವಾಯುನೆಲೆ, ಸೇನಾ ನೆಲೆಗಳನ್ನು ಮಾತ್ರ ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ರಷ್ಯಾದ ಟ್ಯಾಂಕರ್‌ಗಳು ಉಕ್ರೇನ್‌ ದೇಶವನ್ನು ಹಲವು ಗಡಿಗಳ ಮೂಲಕ ಪ್ರವೇಶ ಮಾಡಿದ್ದು, ರಾಜಧಾನಿ ಕೀವ್‌ ಸೇರಿದಂತೆ ಹಲವು ಆಯಕಟ್ಟಿನ ನಗರಗಳನ್ನು ವಶಪಡಿಸಿಕೊಳ್ಳುವತ್ತ ಮುಂದಡಿ ಇಟ್ಟಿದೆ.