5G in India : ಹೇಗಿರಲಿದೆ 5ಜಿ ದುನಿಯಾ? ಕಾರ್ಯನಿರ್ವಹಣೆ ಹೇಗೆ?
ದೇಶದ ಹಲವು ನಗರಗಳಲ್ಲಿ 5ಜಿ ಸೇವೆ ಕಾರ್ಯಾರಂಭ ಮಾಡುತ್ತಿದೆ. ಈ ಹಿನ್ನೆಲೆ 5ಜಿ ಸೇವೆಯಿಂದ ಏನೆಲ್ಲ ಬದಲಾವಣೆಗಳಾಗಿವೆ ಗೊತ್ತಾ..? ಈ ಬಗ್ಗೆ ಇಲ್ಲಿದೆ ವಿವರ..
ದೇಶದಲ್ಲಿ ಈಗಾಗಲೇ 5ಜಿ ಸೇವೆಗೆ ಚಾಲನೆ ದೊರೆತಿದ್ದು, ದೇಶದ ಹಲವು ನಗರಗಳಲ್ಲಿ 5ಜಿ ಸೇವೆ ಕಾರ್ಯಾರಂಭ ಮಾಡುತ್ತಿದೆ. ಈ ಹಿನ್ನೆಲೆ, 5ಜಿ ದುನಿಯಾ ಹೇಗಿರಲಿದೆ ಹಾಗೂ ಅದರ ಕಾರ್ಯನಿರ್ವಹಣೆ ಹೇಗೆ ಎಂಬ ಬಗ್ಗೆ ನಿಮಗೆ ಗೊಂದಲಗಳಿದ್ಯಾ..? 5ಜಿ ಸೇವೆಯಿಂದ ಇಂಟರ್ನೆಟ್ ವೇಗ ಹೆಚ್ಚಾಗಲಿದೆ. ಕೇವಲ 1 - 2 ನಿಮಿಷದಲ್ಲಿ ನೀವು 3 ಗಂಟೆಯ ಸಿನಿಮಾವನ್ನು ಡೌನ್ಲೋಡ್ ಮಾಡಬಹುದಾಗಿದೆ. ಹಾಗೂ, ಅಲ್ಟ್ರಾ ಎಚ್‌ಡಿಯಲ್ಲಿ ವಿಡಿಯೋ ಕಾಲ್ ಮಾಡಬಹುದು. ಇನ್ನು, ಓಟಿಟಿಯಲ್ಲಿ ಬಫರಿಂಗ್ ಇಲ್ಲದೆ ಸಿನಿಮಾ ವೀಕ್ಷಣೆ ಮಾಡಬಹುದು. ಹಾಗೂ, AR VR ಗೇಮ್ ಆಡುವುದು ಸಹ ಸುಲಭವಾಗಲಿದೆ.