Asianet Suvarna News Asianet Suvarna News

ಉದಯ ಟಿವಿಯಲ್ಲಿ ಶುರುವಾಗಲಿದೆ ಹೊಸ ಧಾರಾವಾಹಿ 'ಅಣ್ಣ-ತಂಗಿ'

Nov 19, 2021, 9:06 PM IST

ಉದಯ ವಾಹಿನಿಯ (Udaya TV) 27 ವರ್ಷಗಳ ಸತತ ಮನರಂಜನೆಯ ಭಿನ್ನ ಪ್ರಯತ್ನಕ್ಕೆ ಹೊಸದೊಂದು ಧಾರಾವಾಹಿ ಸೇರಲಿದೆ. 'ಅಣ್ಣ ತಂಗಿ' (Anna Tangi) ಎಂಬ ಶೀರ್ಷಿಕೆಯಲ್ಲಿ ಹೊಸದೊಂದು ಧಾರಾವಾಹಿ​ ಪ್ರಸಾರಕ್ಕೆ ಸಜ್ಜಾಗಿದೆ. ಇದೇ ನವೆಂಬರ್ 22ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿ ರಾತ್ರಿ 7 ಗಂಟೆಗೆ ಈ ಸೀರಿಯಲ್ ಉದಯ ವಾಹಿನಿಯಲ್ಲಿ​ ಪ್ರಸಾರ ಆಗಲಿದೆ. ಅಣ್ಣನ ಪಾತ್ರವನ್ನು ಮಧು ಸಾಗರ್ (Madhu Sagar) ನಿರ್ವಹಿಸುತ್ತಿದ್ದಾರೆ. ತಂಗಿ ತುಳಸಿ ಪಾತ್ರವನ್ನು ಅಖಿಲಾ ಪ್ರಕಾಶ್ (Akhila Prakash) ಮಾಡುತ್ತಿದ್ದಾರೆ. ಚೈತನ್ಯ ಹರಿದಾಸ್ ಸಿನಿಮಾಸ್ ಮೂಲಕ ಈ ಧಾರಾವಾಹಿ ನಿರ್ಮಾಣ ಆಗುತ್ತಿದೆ.  

'ಕಾವ್ಯಾಂಜಲಿ' ಧಾರಾವಾಹಿ ಮೂಲಕ ಕಿರುತೆರೆಗೆ ವಿಶ್ವಾಸ್ ಕಮ್ ಬ್ಯಾಕ್!

ಥ್ರಿಲ್ಲರ್​ ಕಥಾಹಂದರ ಹೊಂದಿದ್ದ 'ಆಕೃತಿ' ಧಾರಾವಾಹಿಯನ್ನು ನಿರ್ದೇಶಿಸಿದ್ದ ಕೆ.ಎಂ, ಚೈತನ್ಯ (KM Chaitanya) ಮತ್ತು ಹರಿದಾಸ್ ಕೆಜಿಎಫ್ (Haridas KGF) ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಇನ್ನು, ಉದಯ ವಾಹಿನಿಯಲ್ಲಿ ಯಾರಿವಳು, ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸದಂತಹ ಹಲವಾರು ಸೀರಿಯಲ್‌ಗಳು ಈಗಾಗಲೇ ವೀಕ್ಷಕರಿಗೆ ಇಷ್ಟವಾಗಿದೆ. ವಿಶೇಷವಾಗಿ ಅರುಣ್ ನಿರ್ದೇಶನದಲ್ಲಿ 'ಕನ್ಯಾದಾನ' (Kanyadana) ಎಂಬ ಹೊಸ ಸೀರಿಯಲ್ ಪ್ರಸಾರವಾಗುತ್ತಿದ್ದು, ಅಂಜಲಿ ವೆಂಚರ್ಸ್ ಈ ಧಾರಾವಾಹಿಯನ್ನು ನಿರ್ಮಿಸಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment