Asianet Suvarna News Asianet Suvarna News

ಬಿಗ್ ಬಾಸ್‌ಗೆ ಯಾಕೆ ಹೋಗಬಾರದು? ನವ್ಯಶ್ರೀ ರಾವ್ ಪ್ರಶ್ನೆ

ಹನಿಟ್ರ್ಯಾಪ್ ವಿವಾದಿದ ನಟಿ, ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ರಾವ್ ಬಿಗ್ ಬಾಸ್ಗೆ ಹೋಗುವ ಬಗ್ಗೆ ಮಾತನಾಡಿದ್ದಾರೆ. ನವ್ಯಶ್ರೀ ಬಿಗ್ ಬಾಸ್ ಗೆ ಹೋಗುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಯಾಕೆ ಹೋಗಬಾರದು ಎಂದು ಕೇಳಿದ್ದಾರೆ. 

Aug 5, 2022, 2:49 PM IST

ಬಿಗ್ ಬಾಸ್ ಒಟಿಟಿ ಪ್ರಾರಂಭವಾಗುತ್ತಿದೆ. ಮೊದಲ ಬಾರಿಗೆ ಕನ್ನಡಲ್ಲಿ ಬಿಗ್ ಬಾಸ್ ಒಟಿಟಿ ಶೋ ಪ್ರಾರಂಭವಾಗುತ್ತಿದೆ. ಆಗಸ್ಟ್ 6ರಿಂದ ಈ ಶೋ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಸಾಕಷ್ಟು ಮಂದಿಯ ಹೆಸರು ಬಿಗ್ ಬಾಸ್ ಒಟಿಟಿಗೆ ಕೇಳಿ ಬರುತ್ತಿದೆ. ಇದೀಗ ಹನಿಟ್ರ್ಯಾಪ್ ವಿವಾದಿದ ನಟಿ, ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ರಾವ್ ಬಿಗ್ ಬಾಸ್ಗೆ ಹೋಗುವ ಬಗ್ಗೆ ಮಾತನಾಡಿದ್ದಾರೆ. ನವ್ಯಶ್ರೀ ಬಿಗ್ ಬಾಸ್ ಗೆ ಹೋಗುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಯಾಕೆ ಹೋಗಬಾರದು ಎಂದು ಕೇಳಿದ್ದಾರೆ. ನನಗೆ ಸಂಬಂಧ ಪಟ್ಟಹಾಗೆ ಕೆಲವು ದಾಖಲೆಗಳು ಕಲರ್ಸ್ ವಾಹಿನಿಗೆ ಹೋಗಿವೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ ಎಂದಿದ್ದಾರೆ. ಬಿಗ್ ಬಾಸ್ ವೇದಿಕೆ ನವ್ಯಾಶ್ರೀಯನ್ನು ಯಾಕೆ ಆಯ್ಕೆ ಮಾಡಬಾರದು ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಾಗಿ ನವ್ಯಾಶ್ರೀ ಕೂಡ ಬಿಗ್ ಬಾಸ್ ಗೆ ಹೋಗ್ತಾರಾ ಎನ್ನುವ ಅನುಮಾನ ಪ್ರೇಕ್ಷಕರಲ್ಲಿ ಮೂಡಿದೆ.