ವೀಕೆಂಡ್ ಕಿಚ್ಚನ ಕಟಕಟೆ: ಹೇಗಿತ್ತು ಈ ವಾರದ ಪಾಠ?
ಬಿಗ್ ಬಾಸ್ ಕನ್ನಡ ಸೀಸನ್ 11 ಕೊನೆಯ ಘಟಕ್ಕೆ ಬಂದು ನಿಂತಿದ್ದು, ಗ್ರ್ಯಾಂಡ್ ಫಿನಾಲೆಗೆ ಬಾಕಿಯಿರುವುದು ಇನ್ನೊಂದೇ ವಾರ.
ಬಿಗ್ ಬಾಸ್ ಕನ್ನಡ 11 ಸೀಸನ್ ಫಿನಾಲೆಗೆ ಇನ್ನೂ ಕೆಲವೇ ದಿನಗಳಷ್ಟೇ ಬಾಕಿಯಿದೆ. ಈ ವಾರದಲ್ಲಿ ಅಂದುಕೊಂಡತೆ ಮಿಡ್ ವೀಕ್ ಎಲಿಮಿನೇಷನ್ ಆಗಿರಲಿದೆ. ಬಿಗ್ ಬಾಸ್ ಕನ್ನಡ ಸೀಸನ್ 11 ಕೊನೆಯ ಘಟಕ್ಕೆ ಬಂದು ನಿಂತಿದ್ದು, ಗ್ರ್ಯಾಂಡ್ ಫಿನಾಲೆಗೆ ಬಾಕಿಯಿರುವುದು ಇನ್ನೊಂದೇ ವಾರ.ಹನುಮಂತ, ಮೋಕ್ಷಿತಾ, ತ್ರಿವಿಕ್ರಮ್ ಅವರು ಫಿನಾಲೆ ವಾರಕ್ಕೆ ಸೇಫ್ ಆಗಿದ್ದಾರೆ. ಉಳಿದ ಸ್ಪರ್ಧಿಗಳಾದ ಧನರಾಜ್, ಉಗ್ರಂ ಮಂಜು, ರಜತ್ & ಭವ್ಯಾ ಅವರು ಇಂದಿನ ಅಂದರೆ ಭಾನುವಾರ ನಡೆಯಲಿರುವ ಕಿಚ್ಚನ ಪಂಚಾಯ್ತಿ ವೇಳೆ ಎಲಿಮಿನೇಷನ್ ಅಗ್ನಿ ಪರೀಕ್ಷೆಯನ್ನು ಇದುರಿಸಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.