ರಚಿತಾನ ತಬ್ಬಿಕೊಳ್ಳಬೇಕು ಎಂದ ಗುರೂಜಿ: ಆರ್ಯವರ್ಧನ್ ಗುರೂಜಿ ಮಾತಿಗೆ ಜನ ಶಾಕ್!

ಬಿಗ್‌ಬಾಸ್‌ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. ಈ ಮಾತಿಗೆ ಬಿಗ್‌ಬಾಸ್ ಮಂದಿ ಒಂದು ಕ್ಷಣ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಗುರೂಜಿಯ ಆ ಬೇಡಿಕೆ ಏನು ಗೊತ್ತಾ? ಬಿಗ್‌ಬಾಸ್ ಮನೆಯಲ್ಲಿ ಕ್ಯಾಮೆರಾ ಮುಂದೆ ಬಂದ ಗುರೂಜಿ ತುಸು ಭಾವುಕರಾಗಿಯೇ ಐ ಲವ್ ಯೂ ರಚಿತಾ ಎಂದು ಬಿಟ್ಟರು.

First Published Oct 20, 2022, 12:42 PM IST | Last Updated Oct 20, 2022, 12:42 PM IST

ಬಿಗ್‌ಬಾಸ್‌ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. ಈ ಮಾತಿಗೆ ಬಿಗ್‌ಬಾಸ್ ಮಂದಿ ಒಂದು ಕ್ಷಣ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಗುರೂಜಿಯ ಆ ಬೇಡಿಕೆ ಏನು ಗೊತ್ತಾ? ಬಿಗ್‌ಬಾಸ್ ಮನೆಯಲ್ಲಿ ಕ್ಯಾಮೆರಾ ಮುಂದೆ ಬಂದ ಗುರೂಜಿ ತುಸು ಭಾವುಕರಾಗಿಯೇ ಐ ಲವ್ ಯೂ ರಚಿತಾ ಎಂದು ಬಿಟ್ಟರು. ರಚಿತಾ ಅಂದಾಕ್ಷಣ ಬಹುತೇಕರು ನಟಿ ರಚಿತಾ ರಾಮ್‌ಗೆ ಹೇಳುತ್ತಿದ್ದಾರಾ ಅಂತ ಅಂದುಕೊಂಡಿದ್ದು ಸುಳ್ಳಲ್ಲ. ಮತ್ತೆ ಮಾತು ಮುಂದುವರೆಸಿದ ಗುರೂಜಿ, ನಿನಗೋಸ್ಕರ ನಾನು ಇಲ್ಲಿಗೆ ಬಂದಿದ್ದೇನೆ. ಆಚೆ ಬಂದ್ಮೇಲೆ ನನ್ನ ತುಂಬಾ ಲವ್ ಮಾಡು, ಯಾವತ್ತೂ ನಾನು ಲವ್ ನೋಡೇ ಇಲ್ಲ. ನಿನ್ನ ಪ್ರೀತಿ ಮಾಡಿಲ್ಲ. ನಿನ್ನ ಜೊತೆ ಲೈವ್ ಆಗಿ ಪ್ರೀತಿ ಮಾಡಿಲ್ಲ. ನಿನ್ನನ್ನು ನಾನು ರಿಯಲ್ ಆಗಿ ಲವ್ ಮಾಡ್ಬೇಕು. ನೀನು ನನ್ನ ಹಗ್ ಮಾಡಬೇಕು ಅಂತೆಲ್ಲ ಮಾತಾಡೋಕೆ ಶುರು ಮಾಡಿದ್ದರು. ಇದನ್ನು ಕೇಳಿ ಬಿಗ್ ಬಾಸ್ ಮನೆಯವರು ಒಂದು ಕ್ಷಣ ಶಾಕ್‌ಗೆ ಒಳಗಾದರು. ರೋಮ್ಯಾಂಟಿಕ್ ಆಗಿ, ಎಮೋಷನಲ್ ಆಗಿ ಗುರೂಜಿ ಯಾವ ರಚಿತಾಗೆ ಈ ಮಾತುಗಳನ್ನು ಹೇಳುತ್ತಿರಬೇಕು ಎಂದು ಹಲವರು ತಲೆ ಕೆಡಿಸಿಕೊಂಡರು. ಅನಂತರ ಗೊತ್ತಾಗಿದ್ದು, ಗುರೂಜಿ ಅವರ ಪತ್ನಿಯ ಹೆಸರು ರಚಿತಾ ಅಂತ. ತಮ್ಮ ಪತ್ನಿಗೆ ಗುರೂಜಿ ಇದನ್ನೆಲ್ಲ ಹೇಳಿದ್ದಾರೆ ಎಂದು ಕೇಳಿ ಎಲ್ಲರೂ ನಿಟ್ಟುಸಿರಿಟ್ಟರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment