ದರ್ಶನ್‌ ವೇಷ ಹಾಕಿದ ಬಿಗ್ ಬಾಸ್ ರಜತ್​ಗೆ ಫ್ಯಾನ್ಸ್ ಕ್ಲಾಸ್: ಆತ ಮಾಡಿದ ತಪ್ಪೇನು? ಗರಂ ಆಗಿದ್ದೇಕೆ ದಾಸನ ಫ್ಯಾನ್ಸ್?

ಬಾಯ್ಸ್ ವರ್ಸಸ್ ಗರ್ಲ್ಸ್ ಸ್ಪರ್ಧಿಯಾಗಿರೋ ರಜತ್ ವಾರ ವಾರ ಫುಲ್ ಮನರಂಜನೆ ಕೊಡ್ತಾ ಇದ್ದಾರೆ. ಈ ವಾರ ಈ ಶೋದಲ್ಲಿ ಹಳೆಯ ಚಿತ್ರಗಳನ್ನ, ಪಾತ್ರಗಳನ್ನ ರಿಕ್ರಿಯೆಟ್ ಮಾಡಲಾಗಿದೆ. 

Share this Video
  • FB
  • Linkdin
  • Whatsapp

ಈ ಸಾರಿ ಬಿಗ್ ಬಾಸ್ ಸೀಸನ್​ನಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ ಸ್ಪರ್ಧಿ ರಜತ್. ತಾನು ದರ್ಶನ್ ಫ್ಯಾನ್ ಅಂತ ಹೇಳ್ತಾ ಇದ್ದ ರಜತ್ ಈಗ ಬಾಯ್ಸ್ ವೆರ್ಸಸ್ ಗರ್ಲ್ಸ್ ಶೋದಲ್ಲಿ ದಾಸನ ವೇಷ ಹಾಕಿದ್ದಾರೆ. ಆದ್ರೆ ಇದನ್ನ ನೋಡಿ ಮೆಚ್ಚಿ ಕೊಂಡಾಡಬೇಕಿದ್ದ ದಾಸನ ಫ್ಯಾನ್ಸ್ ಈಗ ಬುಜ್ಜಿಗೆ ಛೀಮಾರಿ ಹಾಕ್ತಾ ಇದ್ದಾರೆ. ಈ ಸಾರಿ ಬಿಗ್ ಬಾಸ್​​ ಶೋನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ಫಿನಾಲೆವರೆಗೂ ಬಂದಿದ್ದು ರಜತ್. ರಜತ್ ಆಡಿದ ಆಟಕ್ಕೆ ಪ್ರೇಕ್ಷಕರು ಫಿದಾ ಆಗಿದ್ರು. ಒಂದು ಹಂತದಲ್ಲಿ ರಜತ್ ಬಿಗ್ ಬಾಸ್ ವಿಜೇತ ಆದ್ರೂ ಅಚ್ಚರಿಯಿಲ್ಲ ಅನ್ನೋ ಟಾಕ್ ಶುರುವಾಗಿತ್ತು. ಆದ್ರೆ ಹನುಮಂತನ ಹವಾ ಎದುರು ರಜತ್ ಆಟ ನಡೀಲಿಲ್ಲ. ವಿನ್ನರ್ ಆಗದೇ ಹೋದರೂ ಫಿನಾಲೆ ತನಕ ಬಂದ ರಜತ್ ಗೆ ಸಖತ್ ಜನಪ್ರಿಯತೆ ಸಿಕ್ಕಿದೆ. 

ಸದ್ಯ ಬಾಯ್ಸ್ ವರ್ಸಸ್ ಗರ್ಲ್ಸ್ ಸ್ಪರ್ಧಿಯಾಗಿರೋ ರಜತ್ ವಾರ ವಾರ ಫುಲ್ ಮನರಂಜನೆ ಕೊಡ್ತಾ ಇದ್ದಾರೆ. ಈ ವಾರ ಈ ಶೋದಲ್ಲಿ ಹಳೆಯ ಚಿತ್ರಗಳನ್ನ, ಪಾತ್ರಗಳನ್ನ ರಿಕ್ರಿಯೆಟ್ ಮಾಡಲಾಗಿದೆ. ರಜತ್ ದಾಸನ ಗೆಟಪ್ ಹಾಕಿದ್ದಾರೆ. ಬಿಗ್ ಬಾಸ್ ಮನೆಲಿದ್ದಾಗಲೂ ದರ್ಶನ್ ಫ್ಯಾನ್ ಅಂತ ಹೇಳಿಕೊಳ್ತಾ ಇದ್ದ ರಜತ್ ಈಗ ದಾಸನ ಗೆಟಪ್ ಹಾಕಿ ಫ್ಯಾನ್ಸ್​ನ ಮೆಚ್ಚಿಸೋಕೆ ಮುಂದಾಗಿದ್ದಾರೆ. ಹೌದು ರಜತ್ ವೇಷ ನೋಡಿ ಫ್ಯಾನ್ಸ್ ಮೆಚ್ಚಿಕೊಳ್ಳೋದನ್ನ ಬಿಟ್ಟು ರಜತ್​ಗೆ ಛೀಮಾರಿ ಹಾಕ್ತಾ ಇದ್ದಾರೆ. ಅಸಲಿಗೆ ರಜತ್ ಧರಿಸಿರೋ ಪ್ಯಾಂಟ್‌ ಮೇಲೆ ಮೆಜೆಸ್ಟಿಕ್‌, ಅಣ್ಣಾವ್ರು, ಲಂಕೇಶ್‌ ಪತ್ರಿಕೆ, ಪೊರ್ಕಿ, ನನ್ನ ಪ್ರೀತಿಯ ರಾಮು, ಕರಿಯ, ಕಲಾಸಿಪಾಳ್ಯ, ಸುಂಟರಗಾಳಿ, ಮಂಡ್ಯ, ಶಾಸ್ತ್ರಿ, ಅರ್ಜುನ್‌, ಗಜ, ಲಾಲಿಹಾಡು ಸೇರಿದಂತೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟಿಸಿರುವ ಎಲ್ಲ ಸಿನಿಮಾಗಳ ಹೆಸರನ್ನು ಬರೆಸಿಕೊಂಡು, 

ಲಾಂಗ್‌ ಹಿಡಿದು ಖಡಕ್‌ ಆಗಿ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ ರಜತ್‌. ಕೆಲವರು ಈ ಐಡಿಯಾ ಚೆನ್ನಾಗಿದೆ ಗುರೂ ಅಂತ ರಜತ್‌ಗೆ ಭೇಷ್‌ ಎಂದಿದ್ದಾರೆ. ಆದ್ರೆ ಈ ವಿಡಿಯೋದಲ್ಲಿ ರಜತ್ ಶೂ ಮೇಲೆ ಕೂಡ ದರ್ಶನ್ ಹೆಸರು ಕಾಣ್ತಾ ಇದೆ. ಇದನ್ನ ನೋಡಿದ ದಾಸನ ಕಟ್ಟಾ ಫ್ಯಾನ್ಸ್ ಕೆಂಡಾಮಂಡಳ ಆಗಿದ್ದಾರೆ. ನಿನ್ನ ಅಭಿಮಾನ ಓಕೆ.. ಆದ್ರೆ ಅಭಿಮಾನದ ನೆಪದಲ್ಲಿ ನಮ್ಮ ಬಾಸ್ ಗೆ ಅವಮಾನ ಮಾಡ್ತಾ ಇದ್ದೀಯಾ ಅಂತ ರಜತ್​ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಟ್ನಲ್ಲಿ ವಿಭಿನ್ನ ಗೆಟಪ್ ಹಾಕಿ ದಾಸನ ಫ್ಯಾನ್ಸ್ ಮೆಚ್ಚಿಸೋ ಲೆಕ್ಕಾಚಾರದಲ್ಲಿದ್ದ ರಜತ್ ಈ ಕಿರಿಕ್ ನಿಂದ ಮುಖಭಂಗ ಆಗಿದೆ. ದಾಸನ ಫ್ಯಾನ್ಸ್ ಸಹವಾಸವೇ ಬೇಡ ಅನ್ನೋ ಪರಿಸ್ಥಿತಿ ಬಂದಿದೆ.

Related Video