ಹೊರಬಂದ ಡೆವಿಲ್, ಬಣ್ಣ ಹಚ್ಚೋದ್ಯಾವಾಗ ದಾಸ? ಡೆವಿಲ್ ಶೂಟಿಂಗ್ ರಿಸ್ಟಾರ್ಟ್ ಆಗುತ್ತಾ?
ದರ್ಶನ್‌ಗೆ ನಿಯಮಿತ ಜಾಮೀನು ದೊರೆತಿದ್ದು, ಶೂಟಿಂಗ್‌ನಲ್ಲಿ ಭಾಗಿಯಾಗಲು ಅವಕಾಶವಿದೆ. ಆದರೆ, ದರ್ಶನ್ ಇನ್ನೂ ಕೆಲವು ದಿನ ಆಸ್ಪತ್ರೆಯಲ್ಲಿ ಉಳಿಯಲಿದ್ದಾರೆ. ಡೆವಿಲ್ ಸಿನಿಮಾ ಶೂಟಿಂಗ್ ಮತ್ತೆ ಆರಂಭವಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.
ದರ್ಶನ್‌ಗೆ ಹೈಕೋರ್ಟ್ ರೆಗ್ಯೂಲರ್ ಬೇಲ್ ಕೊಟ್ಟಾಗಿದೆ. ಇಷ್ಟು ದಿನ ಮೆಡಿಕಲ್ ಗ್ರೌಂಡ್ಸ್ ಮೇಲೆ ಮಧ್ಯಂತರ ಬೇಲ್ ಮೇಲೆ ಹೊರಗಿದ್ದುದರಿಂದ ದರ್ಶನ್ ಆಸ್ಪತ್ರೆ ಬಿಟ್ಟು ಹೊರಬಂದಿರಲಿಲ್ಲ. ಆದ್ರೀಗ ನಿಯಮಿತ ಜಾಮೀನು ಸಿಕ್ಕಿರೋದ್ರಿಂದ ದರ್ಶನ್ ಸ್ವತಂತ್ರವಾಗಿ ಇರಬಹುದು, ಶೂಟಿಂಗ್‌ನಲ್ಲಿ ಕೂಡ ಭಾಗಿ ಆಗಬಹುದು. ಹಾಗಾದ್ರೆ ಡೆವಿಲ್ ಸಿನಿಮಾ ಶೂಟಿಂಗ್ ರಿಸ್ಟಾರ್ಟ್ ಆಗುತ್ತಾ..? ಹಿಂದೆ ಅನೌನ್ಸ್ ಆಗಿದ್ದ ದಾಸನ ಸಿನಿಮಾಗಳ ಕೆಲಸಗಳು ಶುರು ಆಗಲಿವೆಯ?
ಯೆಸ್ ದರ್ಶನ್‌ಗೆ ರೆಗ್ಯೂಲರ್ ಬೇಲ್ ಮಂಜೂರಾಗಿದೆ. ಇಷ್ಟು ದಿನ ಆಸ್ಪತ್ರೆ ಬಿಟ್ಟು ಹೊರಬಾರದ ದರ್ಶನ್ ಇನ್ಮುಂದೆ ಮುಕ್ತವಾಗಿ ಓಡಾಡೋದಕ್ಕೆ ಅವಕಾಶ ಇದೆ. ಆದ್ರೆ ಬೇಲ್ ಸಿಕ್ಕ ಮೇಲೂ ದರ್ಶನ್ ಆಚೆ ಬಂದಿಲ್ಲ. ಮೂಲಗಳ ಪ್ರಕಾರ ಇನ್ನೂ ಮೂರ್ನಾಲ್ಕು ದಿನ ದರ್ಶನ್ ಆಸ್ಪತ್ರೆಯಲ್ಲೇ ಉಳಿದುಕೊಳ್ಳೋದ್ದಕ್ಕೆ ನಿರ್ಧಾರ ಮಾಡಿದ್ದಾನೆ. ಪಿಸಿಯೋಥೆರಪಿ ಮಾಡಿಸಿಕೊಳ್ತಿರೋ ದರ್ಶನ್, ಕೊಂಚ ರಿಲ್ಯಾಕ್ಸ್ ಆದ ಮೇಲೆ ಹೊರಬರೋಣ ಅಂತ ತೀರ್ಮಾನಿಸಿದಂತಿದೆ. ಅಷ್ಟೊತ್ತಿಗೆ ಅಭಿಮಾನಿಗಳ ಗಲಾಟೆಯೂ ಕೊಂಚ ಕಡಿಮೆ ಆಗಲಿ ಅನ್ನೋ ಪ್ಕಾನ್ ಕೂಡ ಇದೆ.
ನ್ನೂ ಸದ್ಯ ರೆಗ್ಯೂಲರ್ ಬೇಲ್ ಸಿಕ್ಕಿರೋದ್ರಿಂದ ದರ್ಶನ್ ಚಿತ್ರೀಕರಣದಲ್ಲಿ ಕೂಡ ಭಾಗಿಯಾಗೋ ಅವಕಾಶ ಇದೆ. ಸೋ ಡೆವಿಲ್ ಸಿನಿಮಾ ಶೂಟಿಂಗ್ ರಿಸ್ಟಾರ್ಟ್ ಆಗುತ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಅಸಲಿಗೆ ದರ್ಶನ್ನ ಇದೇ ಡೆವಿಲ್ ಸಿನಿಮಾದ ಶೂಟಿಂಗ್ ಸೆಟ್ನಿಂದಲೇ ಅರೆಸ್ಟ್ ಮಾಡಿಕೊಂಡು ಕರೆತರಲಾಗಿತ್ತು.