Insults Customer ಹೀಯಾಳಿಸಿದ ಸಿಬ್ಬಂದಿಗೆ ಬುದ್ಧಿ ಕಲಿಸಿದ ಗ್ರಾಹಕ, 10 ಲಕ್ಷ ರೂ ಮುಂದಿಟ್ಟ ಬೆನ್ನಲ್ಲೇ ಸೇಲ್ಸ್‌ಮ್ಯಾನ್ ಕ್ಷಮೆ

ಬಟ್ಟೆ ನೋಡಿ ಹೀಯಾಳಿಸಿದ ಕಾರು ಶೋ ರೂಂ ಸಿಬ್ಬಂದಿಗೆ ಸರಿಯಾಗಿ ಬುದ್ದಿಕಲಿಸಿದ ಘಟನೆ ತುಮಕೂರಿನ ಮಹೀಂದ್ರ ಶೋ ರೂಂನಲ್ಲಿ ನಡೆದಿದೆ. ಕಾರು ಖರೀದಿಸಲು ಶೋ ರೂಂಗೆ ಬಂದಿದ್ದ ಯುವಕ ಕೆಂಪೇಗೌಡನ ಬಟ್ಟೆ ನೋಡಿ ನಿನಗೆ ಕಾರು ಖರೀದಿಸುವ ಯೋಗತ್ಯೆ ಇಲ್ಲ ಎಂದು ಹೀಯಾಳಿಸಿದ್ದ. ಇತ್ತ ಅವಮಾನಗೊಂಡ ಯುವಕನಿಗೆ ಸ್ನೇಹಿತರು ಸಾಥ್ ನೀಡಿದ್ದಾರೆ. ಒಂದೇ ಗಂಟೆಯಲ್ಲಿ ಸ್ನೇಹಿತರೆಲ್ಲಾ ಸೇರಿ 10 ಲಕ್ಷ ರೂಪಾಯಿ ಹೊಂದಿಸಿ ಕಾರು ನೀಡುವಂತೆ ಪಟ್ಟು ಹಿಡಿದ್ದಾರೆ.  ಅವಮಾನಿಸಿದ ಕಾರಣಕ್ಕೆ ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಇತ್ತ ಸೇಲ್ಸ್‌ಮ್ಯಾನ್ ಹಾಗೂ ಶೋ ರೂಂ ಮಾಲೀಕರು ಯುವಕನ ಬಳಿ ಕ್ಷಮೆ ಕೇಳಿದ್ದಾರೆ.
 

First Published Jan 22, 2022, 10:34 PM IST | Last Updated Jan 22, 2022, 10:34 PM IST

ತುಮಕೂರು(ಜ.22): ಬಟ್ಟೆ ನೋಡಿ ಹೀಯಾಳಿಸಿದ ಕಾರು ಶೋ ರೂಂ ಸಿಬ್ಬಂದಿಗೆ ಸರಿಯಾಗಿ ಬುದ್ದಿಕಲಿಸಿದ ಘಟನೆ ತುಮಕೂರಿನ ಮಹೀಂದ್ರ ಶೋ ರೂಂನಲ್ಲಿ ನಡೆದಿದೆ. ಕಾರು ಖರೀದಿಸಲು ಶೋ ರೂಂಗೆ ಬಂದಿದ್ದ ಯುವಕ ಕೆಂಪೇಗೌಡನ ಬಟ್ಟೆ ನೋಡಿ ನಿನಗೆ ಕಾರು ಖರೀದಿಸುವ ಯೋಗತ್ಯೆ ಇಲ್ಲ ಎಂದು ಹೀಯಾಳಿಸಿದ್ದ. ಇತ್ತ ಅವಮಾನಗೊಂಡ ಯುವಕನಿಗೆ ಸ್ನೇಹಿತರು ಸಾಥ್ ನೀಡಿದ್ದಾರೆ. ಒಂದೇ ಗಂಟೆಯಲ್ಲಿ ಸ್ನೇಹಿತರೆಲ್ಲಾ ಸೇರಿ 10 ಲಕ್ಷ ರೂಪಾಯಿ ಹೊಂದಿಸಿ ಕಾರು ನೀಡುವಂತೆ ಪಟ್ಟು ಹಿಡಿದ್ದಾರೆ.  ಅವಮಾನಿಸಿದ ಕಾರಣಕ್ಕೆ ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಇತ್ತ ಸೇಲ್ಸ್‌ಮ್ಯಾನ್ ಹಾಗೂ ಶೋ ರೂಂ ಮಾಲೀಕರು ಯುವಕನ ಬಳಿ ಕ್ಷಮೆ ಕೇಳಿದ್ದಾರೆ.

Video Top Stories