Asianet Suvarna News Asianet Suvarna News

ಪ್ಯಾರಾಒಲಿಂಪಿಕ್ಸ್‌ ಪದಕ: ನೆಚ್ಚಿನ ಜಿಲ್ಲಾಧಿಕಾರಿ ಕನ್ನಡಿಗ ಸುಹಾಸ್‌‌ ಅಭಿನಂದಿಸಿದ ಯೋಗಿ ಆದಿತ್ಯನಾಥ್

Sep 5, 2021, 7:06 PM IST

ಉತ್ತರ ಪ್ರದೇಶ(ಸೆ.05): ಪ್ಯಾರಾಒಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ IAS ಅಧಿಕಾರಿ ಸುಹಾಸ್ ಯತಿರಾಜ್‌ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರೆ ಮಾಡಿ ಅಭಿನಂದಿಸಿದ್ದಾರೆ.  ಸುಹಾಸ್ ಕೋಟ್ಯಾಂತರ ಭಾರತೀಯರಿಗೆ ಸ್ಪೂರ್ತಿ, ಉತ್ತರ ಪ್ರದೇಶ ಹಾಗೂ ದೇಶದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಯೋಗಿ ಹೇಳಿದ್ದಾರೆ.  ನೋಯ್ಡಾದಲ್ಲಿ ಗೌತಮ ಬುದ್ಧನಗರದ ಜಿಲ್ಲಾಧಿಕಾರಿಯಾಗಿರುವ ಸುಹಾಸ್, ಟೋಕಿಯೋ ಪ್ಯಾರಾಒಂಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದಾರೆ. ಈ ಮೂಲಕ ಪ್ಯಾರಾಒಲಿಂಪಿಕ್ಸ್ ಕೂಟದಲ್ಲಿ ಮೊದಲ ಪದಕ ಗೆದ್ದ ಐಎಎಸ್ ಅಧಿಕಾರಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.