Asianet Suvarna News Asianet Suvarna News

ಟೋಕಿಯೋದಲ್ಲಿ ಬೆಳ್ಳಿ ಗೆದ್ದ IAS ಪುತ್ರ, ಕ್ರಿಕೆಟ್ ಬಿಟ್ಟು ಬ್ಯಾಡ್ಮಿಂಟನ್ ನೆಚ್ಚಿಕೊಂಡ ಕತೆ!

Sep 5, 2021, 5:10 PM IST

ನವದೆಹಲಿ(ಸೆ.05):  ಬ್ಯಾಡ್ಮಿಂಟನ್ ಎಸ್‌ಎಲ್‌4 ವಿಭಾಗದಲ್ಲಿ ಕರ್ನಾಟಕ ಮೂಲದ, ಉತ್ತರ ಪ್ರದೇಶದ ಗೌತಮ್‌ ಬುದ್ಧ ನಗರದ ಜಿಲ್ಲಾಧಿಕಾರಿ ಸುಹಾಸ್‌ ಯತಿರಾಜ್‌ ಫೈನಲ್‌ ಪ್ರವೇಶಿಸಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್‌ ಪದಕ ಗೆದ್ದ ಮೊದಲ ಐಎಎಸ್‌ ಅಧಿಕಾರಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

ಚಿನ್ನ ಗೆದ್ದ ಸುಹಾಸ್ ಗೆ ಬಿಎಸ್‌ವೈ ಅಭಿನಂದನೆ

ಕರ್ನಾಟಕ ಮೂಲದ ಐಎಎಸ್ ಅಧಿಕಾರಿಯಾಗಿರುವ ಸುಹಾಸ್ ವಿಶ್ವದ ನಂಬರ್ ಒನ್ ಆಟಗಾರ ಫ್ರಾನ್ಸ್​ನ ಲೂಕಸ್ ಮಜೂರ್ ವಿರುದ್ಧ ವಿಶ್ವದ ನಂಬರ್ 3 ಆಟಗಾರ ಸುಹಾಸ್ 1-2 ಸೆಟ್​ಗಳ ಅಂತರದಲ್ಲಿ ಸೋಲುವ ಮೂಲಕ ಬೆಳ್ಳಿಗೆ ಕೊರಳೊಡ್ಡಿದ್ದಾರೆ. ಸುಹಾಸ್ ಅವರ ತಾಯಿ ಸಂತಸ ಹಂಚಿಕೊಂಡಿದ್ದಾರೆ.. ಮಗನಿಗೆ ಕ್ರಿಕೆಟ್ ನಲ್ಲಿ ವಿಶೇಷ ಆಸಕ್ತಿ ಇತ್ತು ನಂತರ ಈ ಕಡೆ ಮುಖ ಮಾಡಿದರು ಎಂದು ಹಳೆಯ ದಿನಗಳನ್ನು ಮೆಲಕು ಹಾಕಿದರು .