ವಿಶ್ವ ಛಾಯಾಗ್ರಾಹಕರ ದಿನ: ಫೋಟೋಗ್ರಫಿಗೆ ಟಾಪ್ 5 ಕ್ಯಾಮೆರಾ ಫೋನ್‌ಗಳು!

ವಿಶ್ವ ಛಾಯಾಗ್ರಾಹಕರ ದಿನವಿಂದು. ಮನಸ್ಸನ್ನು ಮುದಗೊಳಿಸುವ ಈ ಹವ್ಯಾಸ ತುಸು ತುಟ್ಟಿಯೂ ಹೌದು. ಫೋಟೋಗ್ರಫಿಗೆ ಬೇಕಾದ ಉತ್ತಮ 5 ಕ್ಯಾಮೆರಾ ಫೋನ್‌ಗಳ ಪಟ್ಟಿ ಇಲ್ಲಿದೆ ನೋಡಿ...

First Published Aug 19, 2019, 7:50 PM IST | Last Updated Aug 19, 2019, 7:50 PM IST

ವಿಶ್ವ ಛಾಯಾಗ್ರಾಹಕರ ದಿನವಿಂದು. ಮನಸ್ಸನ್ನು ಮುದಗೊಳಿಸುವ ಈ ಹವ್ಯಾಸ ತುಸು ತುಟ್ಟಿಯೂ ಹೌದು. ಫೋಟೋಗ್ರಫಿಗೆ ಬೇಕಾದ ಉತ್ತಮ 5 ಕ್ಯಾಮೆರಾ ಫೋನ್‌ಗಳ ಪಟ್ಟಿ ಇಲ್ಲಿದೆ ನೋಡಿ...

1. ಗೂಗಲ್ ಪಿಕ್ಸೆಲ್ 3: ಗೂಗಲ್ ಸಾಫ್ಟ್‌ವೇರ್ ಇರುವ ಕಾರಣ ಈ ಕ್ಯಾಮೆರಾ ವಿಶೇಷವಾಗಿದೆ. ಪಿಕ್ಸೆಲ್ ವಿಶ್ಯೂಯಲ್ ಕೋರ್, ಆಟೋ ಎಚ್‌ಡಿಆರ್ ಫೀಚರ್ ಹಾಗೂ ಇದರ ವಿಶೇಷ ಸಾಫ್ಟ್‌ವೇರ್‌ನಿಂದ ಗೂಗಲ್ ಫಿಕ್ಸೆಲ್ 3ಕ್ಕಿಂತಲೂ ಉತ್ತಮ ಕ್ಯಾಮೆರಾ ಮತ್ತೊಂದಿಲ್ಲ.

2. ಹುವೈ ಪಿ30 ಪ್ರೋ: 40 ಎಂಪಿ, 20 ಎಪಿ ಮತ್ತು 8 ಎಂಪಿ ಲೆನ್ಸ್‌ ಕಾಂಬಿನೇಷನ್‌ನಿಂದ ಫೋಟೋಗ್ರಾಫರ್ಸ್ ಅತ್ಯುತ್ತಮ ಚಿತ್ರ ಸೆರೆ ಹಿಡಿಯಲು ಸಹಕರಿಸುತ್ತೆ ಈ ಕ್ಯಾಮೆರಾ ಫೋನ್. ಸದ್ದನ್ನು ಕಡಿಮೆ ಮಾಡಿ, ಸೂಪರ್ ಝೂಮ್ ಮಾಡೋ ಅವಕಾಶ ಈ ಕ್ಯಾಮೆರಾದಲ್ಲಿದೆ. ಒಟ್ಟಿನಲ್ಲಿ ಪಿ30 ಪ್ರೋ ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸುವುದು ವಿಶೇಷ ಅನುಭವ ನೀಡುವುದು ಗ್ಯಾರಂಟಿ.

3. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್‌10 ಪ್ಲಸ್: ಎಸ್‌10 ಪ್ಲಸ್‌ ಹಿಂದೆ ಮೂರು ಕ್ಯಾಮೆರಾಗಳಿವೆ. ಎರಡು ಮುಂದಿರುತ್ತವೆ. ಹಿಂಭಾಗದಲ್ಲಿ ಆಪ್ಟಿಕಲಿ ಸ್ಟೆಬಲೈಸಡ್ 12 ಮೆಗಾಪಿಕ್ಸೆಲ್ ಕ್ಯಾಮೆರಾವಿದೆ. ಹಗಲು ಹಾಗೂ ರಾತ್ರಿ ಫೋಟೋ ತೆಗೆಯಲು ಅನುವು ಮಾಡಿಕೊಡುವಂತೆ 12 ಮೆಗಾ ಪೆಕ್ಸಿಲ್ ಸೆನ್ಸ್ಯೂರ್ ಸಹ ಇದರಲ್ಲಿದೆ. ನಿಮ್ಮ ಅನಕೂಲಕ್ಕೆ ತಕ್ಕಂತೆ ಸೆಟ್ ಮಾಡಿಕೊಳ್ಳುವ ಅವಕಾಶ ಈ ಕ್ಯಾಮೆರಾದಲ್ಲಿದೆ.

4. ಐಫೋನ್ XS:ಹಿಂಬದಿಯಲ್ಲಿ 12 ಮೆಗಾಫಿಕ್ಸೆಲ್ಸ್, ಎರಡು ಸೆನ್ಸರ್ಸ್ ಹಾಗೂ ಮುಂಭಾಗದಲ್ಲಿ 7 ಎಂಪಿ ಟ್ರೂ ಡೆಪ್ತ್ ಕ್ಯಾಮೆರಾವಿದೆ. ಅದ್ಭುತ ಸೆಲ್ಫೀ ತೆಗೆದುಕೊಳ್ಳಲು ಹೇಳಿ ಮಾಡಿಸಿದಂಥ ಕ್ಯಾಮೆರಾವಿದು. ಬಣ್ಣಗಳನ್ನು ಇದ್ದಂತೆೇ ಸೆರೆ ಹಿಡಿಯುವ ಈ ಕ್ಯಾಮೆರಾಗಳು ಫಾಸ್ಟ್ ಫೋಕಸ್ ಮಾಡಲು ಅನುವು ಮಾಡಿಕೊಡುತ್ತೆ.

5. ಆನರ್ ವ್ಯೂವ್ 20:48  ಮೆಗಾ ಪೆಕ್ಸಿಲ್ಸ್‌ನ ಈ ಕ್ಯಾಮೆರಾದಲ್ಲಿ ಎಂಥದ್ದೇ ಪರಿಸ್ಥಿತಿಯಿದ್ದರೂ ಅತ್ಯುತ್ತಮ ಫೋಟೋವನ್ನು ಸೆರೆ ಹಿಡಿಯಬಹುದು. 25 MP ಪಂಚ್ ಹೋಲ್ ಸೆಲ್ಫೀ ಕ್ಯಾಮೆರಾ ಈ ಫೋನ್‌ನ ಆಕರ್ಷಣೆ. ಪ್ರತ್ಯೇಕ ಭೌತಿಕ ರೂಪ ಹೊಂದಿರದ ಈ ಸೆನ್ಸರ್, ಪರದೆಯ ಭಾಗವಾಗಿರುವುದು ಇದರ ಇನ್ನೊಂದು ವಿಶೇಷತೆ.