Asianet Suvarna News Asianet Suvarna News

ಚೌಕಿದಾರನ ಖಾತೆಗೆ ಖದೀಮರಿಂದ ಕನ್ನ; ಪಿಎಂ ಪರಿಹಾರ ನಿಧಿ ಮೇಲೆ ಅವರ ಕಣ್ಣು..!

ಪ್ರಧಾನಿ ಮೋದಿಯವರ ವೈಯಕ್ತಿಕ ವೆಬ್‌ಸೈಟ್‌ನ ಟ್ವಿಟರ್ ಖಾತೆಯನ್ನು ಸೈಬರ್ ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದು, ಕೂಡಲೇ ಟ್ವಿಟರ್ ತ್ವರಿತ ಕ್ರಮ ಕೈಗೊಂಡಿದ್ದು ಹ್ಯಾಕ್ ಆಗಿದ್ದ ಖಾತೆಯನ್ನು ಸರಿಪಡಿಸಿದೆ. 

Sep 4, 2020, 1:22 PM IST

ನವದೆಹಲಿ (ಸೆ. 04): ಪ್ರಧಾನಿ ಮೋದಿಯವರ ವೈಯಕ್ತಿಕ ವೆಬ್‌ಸೈಟ್‌ನ ಟ್ವಿಟರ್ ಖಾತೆಯನ್ನು ಸೈಬರ್ ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದು, ಕೂಡಲೇ ಟ್ವಿಟರ್ ತ್ವರಿತ ಕ್ರಮ ಕೈಗೊಂಡಿದ್ದು ಹ್ಯಾಕ್ ಆಗಿದ್ದ ಖಾತೆಯನ್ನು ಸರಿಪಡಿಸಿದೆ. 

ಈ ಖಾತೆಯನ್ನು ಹ್ಯಾಕ್‌ ಮಾಡಿದ್ದಾಗಿ ಹೇಳಿಕೊಂಡಿರುವ ‘ಜಾನ್‌ ವಿಕ್‌’ ಎಂಬ ಸೈಬರ್‌ ಕಳ್ಳರ ಗುಂಪು, ‘ಕೊರೋನಾ ನಿಯಂತ್ರಣಕ್ಕಾಗಿ ಸ್ಥಾಪಿಸಲಾಗಿರುವ ಪಿಎಂ ಕೇ​ರ್‍ಸ್ ಫಂಡ್‌’ಗೆ ಕ್ರಿಪ್ಟೋ ಕರೆನ್ಸಿ ಬಳಸಿ ದೇಣಿಗೆ ನೀಡಿ’ ಎಂದು ಕರೆ ನೀಡಿತ್ತು. ಕೂಡಲೇ ಹ್ಯಾಕ್ ಆಗಿರುವುದು ಗಮನಕ್ಕೆ ಬಂದಿದ್ದು, ಟ್ವಿಟರ್ ಅದನ್ನು ಸರಿಪಡಿಸಿದೆ. ಹಾಗಾದರೆ ಯಾವ ಕಾರಣಕ್ಕೆ ಮೋದಿ ಟ್ವಿಟರ್‌ ಖಾತೆಯನ್ನು ಹ್ಯಾಕ್ ಮಾಡಲಾಯ್ತು? ಮಾಹಿತಿಗಳು ಸೋರಿಕೆಯಾಗಿವೆಯಾ? ಇಲ್ಲಿದೆ ಹೆಚ್ಚಿನ ಮಾಹಿತಿ..!

ಪ್ರಧಾನಿ ಮೋದಿಗೆ ಜೀವ ಬೆದರಿಕೆ: ಭಾರೀ ಭದ್ರತೆ ನಿಯೋಜನೆ