Asianet Suvarna News Asianet Suvarna News

ನ.17 ರಿಂದ 3 ದಿನ Bengaluru Tech Summit, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟನೆ

Nov 13, 2021, 10:19 AM IST
  • facebook-logo
  • twitter-logo
  • whatsapp-logo

ಬೆಂಗಳೂರು (ನ. 13): 24 ನೇ ಆವೃತ್ತಿಯ 'ಬೆಂಗಳೂರು ಟೆಕ್‌ ಸಮ್ಮಿಟ್ 2021' (Bengaluru Tech Summit) ಇದೇ ನವೆಂಬರ್ 17ರಿಂದ ಆರಂಭವಾಗಲಿದೆ. 17 ರಿಂದ 19 ರವರೆಗೆ ನಡೆಯಲಿರುವ ಕರ್ನಾಟಕ ಹಾಗೂ ದೇಶದ ಮಹತ್ವದ ಕಾರ್ಯಕ್ರಮವಾದ ಬೆಂಗಳೂರು ತಂತ್ರಜ್ಞಾನ ಶೃಂಗವನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ( Venkaiah Naidu) ಉದ್ಘಾಟಿಸಲಿದ್ದಾರೆ. 

Bengaluru Tech Summit -2021 | ಮೇಕ್ ಇನ್ ಇಂಡಿಯಾ ರೀತಿ ಮೇಕ್ ಇನ್ ಕರ್ನಾಟಕ: ಅಶ್ವತ್ಥ್ !

ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಹಾಗೂ ಐಟಿ-ಬಿಟಿ ಸಚಿವ ಡಾ‌. ಅಶ್ವತ್ ನಾರಾಯಣ್ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಭಾಗಿಯಾದರು. ಈ ಬಾರಿ 30ಕ್ಕೂ ಹೆಚ್ಚು ದೇಶಗಳು ಈ ಟೆಕ್‌ ಸಮ್ಮಿಟ್ ನಲ್ಲಿ ಪಾಲ್ಗೊಳ್ಳಲಿವೆ. ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ದಾವೋಸ್ ನಲ್ಲಿರುವ ವಿಶ್ವ ಆರ್ಥಿಕ ವೇದಿಕೆಯ ಮುಖ್ಯಸ್ಥರು ಸೇರಿದಂತೆ ಹಲವು ಗಣ್ಯರು ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ.‌ ಈ ಸಮ್ಮಿಟ್ ನಿಂದಾಗಿ ತಂತ್ರಜ್ಞಾನ ಕ್ಷೇತ್ರ ಇನ್ನಷ್ಟು ವಿಸ್ತರಣೆ ಆಗಲಿದೆ. ಉದ್ಯೋಗವಕಾಶಗಳೂ ಕೂಡ ಹೆಚ್ಚಲಿವೆ ಅಂತ ಸಚಿವರು ತಿಳಿಸಿದರು. 

Video Top Stories