Asianet Suvarna News Asianet Suvarna News

ಶಾಸಕನ ಧನದಾಹ, ವರ್ಗಾವಣೆ ದಂಧೆಗೆ ಬಲಿಯಾದ್ರಾ ಪಿಎಸ್​ಐ ಪರಶುರಾಮ್‌?

ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದ ಶಾಸಕನೊಬ್ಬನ ಧನದಾಹಕ್ಕೆ ಪಿಎಸ್‌ಐ ಪರಶುರಾಮ್‌ ಬಲಿಯಾಗಿದ್ದಾರಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಪರಶುರಾಮ್‌ ಅವರ ಪತ್ನಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್‌ ಹಾಗೂ ಆತನ ಪುತ್ರ ಪಂಪನಗೌಡ ವಿರುದ್ಧ ನೇರ ಅರೋಪ ಮಾಡಿದ್ದಾರೆ.
 

First Published Aug 3, 2024, 11:17 PM IST | Last Updated Aug 3, 2024, 11:17 PM IST

ಬೆಂಗಳೂರು (ಆ.3): ಏಷ್ಯಾನೆಟ್‌ ಸುವರ್ಣನ್ಯೂಸ್‌ ನಿರಂತರ ವರದಿಯ ಬಳಿಕ ಯಾದಗಿರಿ ಪಿಎಸ್‌ಐ ಪರಶುರಾಮ್‌ ಅವರ ಅನುಮಾನಾಸ್ಪದ ಸಾವಿನ ಬಗ್ಗೆ ಎಫ್‌ಐಆರ್‌ ದಾಖಲಾಗಿದೆ. ಯಾದಗಿರಿಯ ಕಾಂಗ್ರೆಸ್‌ ಶಾಸಕ ಚನ್ನಾರೆಡ್ಡಿ ಪಾಟೀಲ್‌ ಹಾಗೂ ಆತನ ಪುತ್ರ ಪಂಪನಗೌಡ ವಿರುದ್ಧ ಪಿಎಸ್‌ಐ ಪರಶುರಾಮ್‌ ಅವರ ಪತ್ನಿ ಶ್ವೇತಾ ನೇರ ಆರೋಪ ಮಾಡಿದ್ದರು.

ಎಫ್‌ಐಆರ್‌ ದಾಖಲು ಮಾಡಲು ಬರೋಬ್ಬರಿ 18 ಗಂಟೆ ತೆಗೆದುಕೊಳ್ಳಲಾಗಿತ್ತು. ಶಾಸಕ ಪಾಟೀಲ್‌ ಎ1 ಹಾಗೂ ಅವರ ಪುತ್ರ ಎ2 ಆರೋಪಿಯಾಗಿದ್ದಾರೆ. ಯಾದಗಿರಿ ಠಾಣೆಯಲ್ಲಿಯೇ ಪಿಎಸ್‌ಐ ಆಗಿ ಉಳಿದುಕೊಳ್ಳಲು 30 ಲಕ್ಷ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ಪಿಎಸ್‌ಐ ಅನುಮಾನಾಸ್ಪದ ಸಾವು; ಯಾದಗಿರಿ ಶಾಸಕ, ಪುತ್ರನ ವಿರುದ್ಧ ಕುಟುಂಬ, ಸಂಘಟನೆಗಳು ಗಂಭೀರ ಆರೋಪ!

ಅದಲ್ಲದೆ, ಮಾತನಾಡಲು ಹೋಗಿದ್ದ ಪರುಶುರಾಮ್‌ಗೆ ಹೊಲೆಯ ಎಂದು ಜಾತಿನಿಂದನೆಯನ್ನೂ ಶಾಸಕರು ಮಾಡಿದ್ದು ಎನ್ನಲಾಗಿದ್ದು, ಈ ಕುರಿತಾಗಿಯೂ ಕೇಸ್‌ ದಾಖಲಾಗಿದೆ. ಈ ನಡುವೆ ಸರ್ಕಾರ ಪ್ರಕರಣದ ಗಂಭೀರತೆ ಅರಿತು ಸಿಐಡಿ ತನಿಖೆಗೆ ಆದೇಶ ನೀಡಿದೆ.
 

Video Top Stories