
ಪ್ರಿಯಕರನ ಜೊತೆ ಮನೆ ಬಿಟ್ಟು ಹೋದ ಮೂರು ಮಕ್ಕಳ ತಾಯಿ: ಪತಿ ಕಣ್ಣೀರು
ಪ್ರಿಯಕರನಿಗೋಸ್ಕರ ಮನೆ, ಗಂಡ, ಸಂಸಾರ ಬಿಟ್ಟು ಹೋಗಿದ್ದಾಳೆ ಮೂರು ಮಕ್ಕಳ ತಾಯಿ. ಈ ಘಟನೆಯು ಬನ್ನೇರುಘಟ್ಟ ಸಮೀಪದ ಬಸವನಪುರ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರು (ಸೆ.05): ಪ್ರಿಯಕರನಿಗೋಸ್ಕರ ಮನೆ, ಗಂಡ, ಸಂಸಾರ ಬಿಟ್ಟು ಹೋಗಿದ್ದಾಳೆ ಮೂರು ಮಕ್ಕಳ ತಾಯಿ. ಈ ಘಟನೆಯು ಬನ್ನೇರುಘಟ್ಟ ಸಮೀಪದ ಬಸವನಪುರ ಗ್ರಾಮದಲ್ಲಿ ನಡೆದಿದೆ. ಹೆಂಡತಿ ಲೀಲಾವತಿಗಾಗಿ ಗಂಡ ಮತ್ತು ಮಕ್ಕಳು ಗೋಳಾಡುತ್ತಿದ್ದು, ಮನೆಯಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಸದ್ಯ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಲೀಲಾವತಿ ಪತಿ ದೂರು ದಾಖಲು ಮಾಡಿದ್ದಾರೆ. 11 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಲೀಲಾವತಿ ಹಾಗೂ ಮಂಜುನಾಥ್ ದಂಪತಿಗೆ ಎರಡು ಗಂಡು ಹಾಗೂ ಒಂದು ಹೆಣ್ಣು ಮಗು ಇತ್ತು. ಇದೇ ಭಾನುವಾರ ಪ್ರಿಯಕರನ ಜೊತೆ ಲೀಲಾವತಿ ಓಡಿ ಹೋಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿದ ನಂತರ ಪೊಲೀಸ್ ಠಾಣೆಗೆ ಲೀಲಾವತಿ. ಬಂದಿದ್ದರು. ಅಲ್ಲದೇ ತನಗೆ ಪ್ರಿಯಕರನೇ ಬೇಕೆಂದು ಅವನ ಜೊತೆ ಹೊರಟು ಹೋಗಿದ್ದಾರೆ. ಇದೀಗ ತನ್ನ ಹೆಂಡತಿ ತನಗೆ ಬೇಕೆಂದು ಪತಿ ಮಂಜುನಾಥ ಕಣ್ಣೀರು ಹಾಕುತ್ತಿದ್ದಾರೆ.