ಊರಹಬ್ಬಕ್ಕೆ ಹೋದ ಹುಡುಗ ಆಂಟಿಯನ್ನೇ ಪಟಾಯಿಸಿಬಿಟ್ಟ, ದುರಂತ ಅಂತ್ಯ ಕಂಡ ಅನೈತಿಕ ಲವ್

ಯಾವುದೋ ಜಾತ್ರೆಗೆ ಹೋದಾಗ ಅವರಿಬ್ಬರ ಪರಿಚಯವಾಗಿತ್ತು.. ನಂತರ ಸ್ನೇಹವಾಗಿತ್ತು.. ಆದ್ರೆ ಅದೇಗೋ ಎರಡು ವರ್ಷದಿಂದ ಈಚೆಗೆ ಇಬ್ಬರ ಮಧ್ಯೆ ದೇಹ ಸಂಬಂಧ ಕೂಡ ಬೆಳೆದುಬಿಟ್ಟಿತ್ತು.. ಈಕೆ ಶಾಲೆಗೆ ಹೋಗ್ತೀನಿ.. ತವರು ಮನೆಗೆ ಹೋಗ್ತೀನಿ ಅಂತ ಹೇಳಿ ಆತನ ಜೊತೆಗೆ ಹೊರಟು ಬಿಡುತ್ತಿದ್ದಳು.

Share this Video
  • FB
  • Linkdin
  • Whatsapp

ಅದೊಂದು ಶ್ರೀಮಂತ ಕುಟುಂಬ.. ಗಂಡ ಹೆಂಡತಿ ಮತ್ತು ಇಬ್ಬರು ಪುಟ್ಟ ಮಕ್ಕಳು.. ಗಂಡ ಬೆಂಗಳೂರಿನ ಹೊರವಲಯದಲ್ಲಿ ದೊಡ್ಡ ಜಮೀನ್ದಾರ.. ಒಳ್ಳೆ ಸಂಪಾದನೆ.. ಹೆಂಡತಿ ಮಕ್ಕಳನ್ನ ನೋಡಿಕೊಂಡು ಮನೆಯಲ್ಲಿರುತ್ತಿದ್ದಳು.. ಮಕ್ಕಳೂ ಕೂಡ ಚೆನ್ನಾಗಿ ಓದುತ್ತಿದ್ವು.. ಆದ್ರೆ ಆವತ್ತೊಂದು ದಿನ ತವರು ಮನೆಗೆ ಹೋಗ್ತೀನಿ ಅಂತ ಹೊರಟವಳು ವಾಪಸ್​​ ಆಗೋದೇ ಇಲ್ಲ.. ಆದ್ರೆ ಮಧ್ಯರಾತ್ರಿಯಲ್ಲಿ ಪೊಲೀಸರು ಫೋನ್​ ಮಾಡಿ ಆಕೆ ಸತ್ತಿದ್ದಾಳೆ ಅಂತ ಹೇಳ್ತಾರೆ.. ಅವಳನ್ನ ಹಂತಕ ಲಾಡ್ಜ್​ವೊಂದರಲ್ಲಿ ಬರ್ಬರವಾಗಿ ಕೊಲೆ ಮಾಡಿರುತ್ತಾನೆ... ಅಷ್ಟಕ್ಕೂ ತವರು ಮನೆಗೆ ಅಂತ ಹೊರಟವಳು ಲಾಡ್ಜ್​​ಗೆ ಹೋಗಿದ್ದೇಕೆ..?ಒಬ್ಬ ಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಕಥೆ

Related Video