ಸಾರಿಗೆ ಸಚಿವರು ನೋಡಲೇಬೇಕಾದ ಸುದ್ದಿ, ಫುಟ್‌ಬೋರ್ಡ್‌ನಲ್ಲೇ ಮಗು ಹಿಡಿದು ಮಹಿಳೆ ಪ್ರಯಾಣ!

ಕೊಪ್ಪಳದಲ್ಲಿ ತುಂಬಿ ತುಳುಕುತ್ತಿದ್ದ ಬಸ್‌ ನ ಫುಟ್ ಬೋರ್ಡ್ ನಲ್ಲಿ ಅಜ್ಜಿಯೊಬ್ಬಳು ಪುಟ್ಟ ಮಗುವನ್ನು ಹಿಡಿದು ಕುಳಿತು ಪ್ರಯಾಣಿಸಿದ್ದು, ಹುಲಿಗಿಯಿಂದ ಕೊಪ್ಪಳಕ್ಕೆ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಈ ಘಟನೆ ನಡೆದಿದೆ.

Share this Video
  • FB
  • Linkdin
  • Whatsapp

ಕೊಪ್ಪಳ (ಜು.12): ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ ಎಫೆಕ್ಟ್ ನಿಂದ ಜನ ಮಾನವೀಯತೆ ಮರೆತಿದ್ದಾರೆ. ಕೊಪ್ಪಳದಲ್ಲಿ ತುಂಬಿ ತುಳುಕುತ್ತಿದ್ದ ಬಸ್‌ ನ ಫುಟ್ ಬೋರ್ಡ್ ನಲ್ಲಿ ಅಜ್ಜಿಯೊಬ್ಬಳು ಪುಟ್ಟ ಮಗುವನ್ನು ಹಿಡಿದು ಕುಳಿತು ಪ್ರಯಾಣಿಸಿದ್ದು, ಹುಲಿಗಿಯಿಂದ ಕೊಪ್ಪಳಕ್ಕೆ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಈ ಘಟನೆ ನಡೆದಿದೆ. ಮೊಮ್ಮಗಳಿಗೆ ಗಾಳಿಯಾಡಲ್ಲ ಎಂದು ಅಜ್ಜಿ ಫುಟ್ ಬೋರ್ಡ್ ನಲ್ಲಿ ಕುಳಿತು ಪ್ರಯಾಣಿಸಿದ್ದಾರೆ. ಈ ರೀತಿಯ ಪ್ರಯಾಣದ ವೇಳೆ ಅನಾಹುತ ನಡೆದರೆ ಯಾರು ಹೊಣೆ ಎಂಬುದೇ ಸದ್ಯ ಇರುವ ಪ್ರಶ್ನೆ

Related Video