ಗಂಡನಿಗೆ ಬುದ್ಧಿ ಕೊಟ್ಟು, ನನ್ನ ಜೊತೆ ಸಂಸಾರ ಮಾಡುವಂತೆ ಮಾಡು ಎಂದು ದೇವರಿಗೆ ಪತ್ರ ಬರೆದ ಪತ್ನಿ..!

ಕೌಟುಂಬಿಕ ಕಲಹದಿಂದ ಮುನಿಸಿಕೊಂಡು ಮನೆ ಬಿಟ್ಟು ಹೋಗಿದ್ದಾರೆ ಪತಿ. ಪತಿ ವಾಪಸ್ ಬರುವಂತೆ ಪತ್ನಿ ಪತ್ರ ಬರೆದಿದ್ದಾರೆ.

First Published Feb 15, 2021, 10:02 AM IST | Last Updated Feb 15, 2021, 10:40 AM IST

ಬೆಂಗಳೂರು (ಫೆ. 15): ಕೌಟುಂಬಿಕ ಕಲಹದಿಂದ ಮುನಿಸಿಕೊಂಡು ಮನೆ ಬಿಟ್ಟು ಹೋಗಿದ್ದಾರೆ ಪತಿ. ಪತಿ ವಾಪಸ್ ಬರುವಂತೆ ಪತ್ನಿ ಪತ್ರ ಬರೆದಿದ್ದಾರೆ. 'ನನ್ನ ಗಂಡ ಜಗಳವಾಡಿಕೊಂಡು ನನ್ನ ಬಿಟ್ಟು ಹೋಗಿದ್ದಾನೆ. ಆತನಿಗೆ ಒಳ್ಳೆಯ ಬುದ್ಧಿ ಕೊಡು. ನನ್ನ ಜೊತೆ ಸಂಸಾರ ಮಾಡುವ ಹಾಗೆ ಮಾಡು. ನಾನು ಹೇಳಿದ ಹಾಗೆ ಕೇಳುವಂತೆ ಮಾಡು' ಎಂದು ಪತ್ರ ಬರೆದಿದ್ದು, ಕೊಳ್ಳೆಗಾಲದ ನಾರಾಯಣ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಪತ್ರ ಸಿಕ್ಕಿದೆ.

24 ಗಂಟೆಯಲ್ಲಿ 5 ಕಾಂಗ್ರೆಸ್ ಶಾಸಕರ ರಾಜೀನಾಮೆ: ಹೊಸ ಬಾಂಬ್ ಸಿಡಿಸಿದ ಸಚಿವ

ಮೈದಾನದಲ್ಲಿ ಸಿಕ್ಕ ಮಾಂಗಲ್ಯ ಸರವನ್ನು ವಾಪಸ್ ಕೊಟ್ಟು ಮಾನವೀಯತೆ ಮೆರೆದಿದ್ದಾರೆ ಸ್ನೇಹಿತರು. ಚಿಕ್ಕಮಗಳೂರಿನ ಆಟದ ಮೈದಾನದಲ್ಲಿ ವಾಕಿಂಗ್ ಮಾಡುವಾಗ ಮಹಿಳೆಯೊಬ್ಬರು ಮಾಂಗಲ್ಯ ಸರ ಬೀಳಿಸಿಕೊಂಡಿದ್ದರು. ಆ ಸರ ವಿನೋದ್ ರಾಘವೇಂದ್ರ ಎನ್ನುವವರಿಗೆ ಸಿಕ್ಕಿದೆ. ಕೂಡಲೇ ಪೋಸ್ಟರ್ ಅಂಟಿಸಿದ್ದಾರೆ.  ಕೂಡಲೇ ದಂಪತಿ ಓಡಿ ಬಂದಿದ್ದಾರೆ. ಪೂರ್ವಾಪರ ವಿಚಾರಿಸಿ ಮಾಂಗಲ್ಯವನ್ನು ಹಿಂತಿರುಗಿಸಿದ್ದಾರೆ. 

 

Video Top Stories