Hijab Row: ಹಿಜಾಬ್‌ಗೆ ಪಟ್ಟು ಹಿಡಿದ 6 ಮಂದಿಗೆ ಗುಪ್ತ ತರಬೇತಿ ನೀಡಲಾಗಿತ್ತಾ.?
ಹಿಜಾಬ್ VS ಕೇಸರಿ ಸಂಘರ್ಷ ಇಡೀ ದೇಶದ ಗಮನ ಸೆಳೆಯುತ್ತಿದೆ. ವಿವಾದ ಸಂಘರ್ಷದ ಸ್ವರೂಪ ಪಡೆದಿದೆ. ಈ ಗಲಾಟೆ ಬೇರೆ ಬೇರೆ ಸ್ವರೂಪ ಪಡೆಯುತ್ತಿದೆ.
ಹಿಜಾಬ್ VS ಕೇಸರಿ (Hijab VS Saffron Row) ಸಂಘರ್ಷ ಇಡೀ ದೇಶದ ಗಮನ ಸೆಳೆಯುತ್ತಿದೆ. ವಿವಾದ ಸಂಘರ್ಷದ ಸ್ವರೂಪ ಪಡೆದಿದೆ. ಈ ಗಲಾಟೆ ಬೇರೆ ಬೇರೆ ಸ್ವರೂಪ ಪಡೆಯುತ್ತಿದೆ.
ಕಾಲೇಜಿನಲ್ಲಿ ಹಿಜಾಬ್ ಧರಿಸುವಂತೆ ಪಟ್ಟು ಹಿಡಿದಿರುವ 6 ಮಂದಿ ವಿದ್ಯಾರ್ಥಿಗಳಿಗೆ, ಮೊದಲು ಗುಪ್ತ ತರಬೇತಿ ನೀಡಿ ಬ್ರೈನ್ ವಾಶ್ ಮಾಡಲಾಗಿತ್ತು. ಸಂಘಟನೆಯೊಂದು ಈ ಕಾಲೇಜಿನ 12 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಪಟ್ಟು ಹಿಡಿಯಲು ಗುಪ್ತ ಸ್ಥಳದಲ್ಲಿ ತರಬೇತಿ ನೀಡಿದೆ. ಆದರೆ ಅವರಲ್ಲಿ 6 ವಿದ್ಯಾರ್ಥಿನಿಯರ ಹೆತ್ತವರು ತಮ್ಮ ಮಕ್ಕಳಿಗೆ ಶಿಕ್ಷಣವೇ ಮುಖ್ಯ ಎಂದು ಹೇಳಿ ಹಿಜಾಬ್ ಧರಿಸದೇ ಮಕ್ಕಳನ್ನು ಕಾಲೇಜಿಗೆ ಕಳುಹಿಸಿದರು. ಇನ್ನುಳಿದ 6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದು ವಿವಾದ ಸೃಷ್ಟಿಸಿದ್ದಾರೆ. ಅವರು ಕಾಲೇಜಿಗೆ ಪ್ರವೇಶ ಪಡೆದ ಆರಂಭದಲ್ಲಿ ಹಿಜಾಬ್ ಧರಿಸುತ್ತಿರಲಿಲ್ಲ. ಈ ಬಗ್ಗೆ ತಮ್ಮಲ್ಲಿ ಫೋಟೋ ಸಾಕ್ಷಿಗಳಿವೆ. ಈ ಎಲ್ಲಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.
Hijab Row:ಮಧ್ಯಂತರ ಆದೇಶ ನೀಡುವ ಕುರಿತು ವಿಸ್ತೃತ ಪೀಠವೇ ತೀರ್ಮಾನಿಸಲಿ: ನ್ಯಾ ಕೃಷ್ಣ ದೀಕ್ಷಿತ್
ಹಿಜಾಬ್ ವಿವಾದದ ಬಗ್ಗೆ ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಏಕಕಾಲದಲ್ಲಿ ಕೇಸರಿ ಶಾಲು ಪೇಟ ಧರಿಸಿ, ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಗಲಭೆ ನಡೆಸಿದ್ದು ಸಂಘ ಪರಿವಾರದ ಷಡ್ಯಂತ್ರವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆಆರೋಪಿಸಿದ್ದಾರೆ.