ಬೆಂಗಳೂರು ಮೈಸೂರು ಹೆದ್ದಾರಿ ಹಿಂದಿದೆ 'ಸಿಂಹ' ಶಕ್ತಿ, ಇದರೊಳಗೆ ಯಾಕೆ ಬಂತು ಶ್ರೇಯಸ್ಸಿನ ಕುಸ್ತಿ?

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಹೇಗಿದೆ? ಪ್ರಯಾಣದ ಹಾಗೂ ಡ್ರೈವಿಂಗ್ ಅನುಭವ ಹೇಗಿದೆ? ಒಂದಡೆ ಈ ಹೆದ್ದಾರಿ ಕ್ರೆಡಿಟ್ ಪಡೆಯಲು ರಾಜಕೀಯ ಬಡಿದಾಟ ಆರಂಭಗೊಂಡಿದೆ. ಇದರ ನಡುವೆ ಹೆದ್ದಾರಿ ಘೋಷಣೆಯಿಂದ ಹಿಡಿದೂ ಕಾಮಗಾರಿ ಸಂಪೂರ್ಣವಾಗುವವರೆಗೆ ಸತತವಾಗಿ ಶ್ರಮವಹಿಸಿದ ಸಂಸದ ಪ್ರತಾಪ್ ಸಿಂಹ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ. ದಶಪಥ ಹೆದ್ದಾರಿಯಲ್ಲಿ ಪ್ರತಾಪ್ ಸಿಂಹ ಜೊತೆ ಏಷ್ಯಾನೆಟ್ ಸುವರ್ಣನ್ಯೂಸ್ ಸವಾರಿ ನಡುವಿನ ಕುತೂಹಲಕರ ಸಂವಾದ ಇಲ್ಲಿದೆ.

Share this Video
  • FB
  • Linkdin
  • Whatsapp

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಇದೀಗ ದೇಶಾದ್ಯಂತ ಸುದ್ದಿಯಾಗಿದೆ. ಒಂದು ದೇಶದ ಅತ್ಯುತ್ತಮ ಎಕ್ಸ್‌ಪ್ರೆಸ್‌ವೇ ಅನ್ನೋ ಕಾರಣಕ್ಕೆ ಸದ್ದು ಮಾಡಿದರೆ, ಮತ್ತೊಂದು ಕ್ರಿಕೆಟ್ ವಾರ್‌ನಿಂದಲೂ ಸುದ್ದಿಯಾಗಿದೆ. ಈ ರಸ್ತೆ ಘೋಷಣೆ, ಯೋಜನೆ, ಕಾಮಗಾರಿ, ಖರ್ಚು ವೆಚ್ಚ, ಎದುರಾದ ಸಮಸ್ಯೆ ಹಾಗೂ ಸವಾಲುಗಳ ಕುರಿತು ಖುದ್ದು ಪ್ರತಾಪ್ ಸಿಂಹ ಮಾತನಾಡಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಇದೇ ದಶಪಥ ಹೆದ್ದಾರಿಯಲ್ಲಿ ಪ್ರತಾಪ್ ಸಿಂಹ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಮಾತುಕತೆಯಲ್ಲಿ ಹಲವು ರೋಚಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video