ಆತ್ಮಹತ್ಯೆ ಪ್ರಕರಣದಲ್ಲಿ ಡೆತ್‌ ನಟ್‌ನಲ್ಲಿ ಹೆಸರಿದ್ರೆ, ಮುಂದೇನು?

ಆತ್ಮಹತ್ಯೆ ಪ್ರಕರಣದಲ್ಲಿ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಡೆತ್ ನೋಟ್ ನಲ್ಲಿ ಯಾರದೋ ಹೆಸರು ಬರೆದಿಟ್ಟಲ್ಲಿ ಮಂದೇನಾಗುತ್ತದೆ? ಆತನನ್ನು ಅರೆಸ್ಟ್ ಮಾಡ್ತಾರಾ? ತನಿಖೆ ಹೇಗೆ ನಡೆಯುತ್ತೆ? ಇವೆಲ್ಲದರ ವರದಿ
 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 15): ಕ್ಲಾಸ್ 1 ಗುತ್ತಿಗೆದಾರ ಸಂತೋಷ್ ಪಾಟೀಲ್ (Santosh Patil) ಆತ್ಮಹತ್ಯೆ ವಿಚಾರ ಹಾಗೂ ಅದರ ಬೆನ್ನಲ್ಲಿಯೇ ಬಂದ 40% ಕಮೀಷನ್ ವಿಚಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ (K S Eshwarappa) ಅವರ ತಲೆದಂಡವಾಗಿದೆ. ಆದರೆ, ಕಾಂಗ್ರೆಸ್ (Congress) ಮಾತ್ರ ಪಟ್ಟು ಬಿಡುತ್ತಿಲ್ಲ. ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಈಶ್ವರಪ್ಪ ಅವರ ಬಂಧನವಾಗಬೇಕು ಎಂದು ಹೇಳಿದೆ.

ಕಾಂಗ್ರೆಸ್ ಸಿಕ್ತು ಬಹುದೊಡ್ಡ ಅಸ್ತ್ರ, ಬಿಜೆಪಿ ವಿರುದ್ಧ ಸಮರಕ್ಕೆ ಸಿದ್ಧ

ಅಷ್ಟಕ್ಕೂ ಕಾಂಗ್ರೆಸ್ ನೀಡಿರೋ ಕಾರಣ ಏನಂದ್ರೆ ಮೆಸೇಜ್ ನಲ್ಲಿ ನನ್ನ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ಬರೆದು ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಪ್ರಕರಣದಲ್ಲಿ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರದೋ ಹೆಸರನ್ನು ಬರೆದಿಟ್ಟಲ್ಲಿ ಮುಂದೇನಾಗುತ್ತದೆ? ಆತನನ್ನು ಅರೆಸ್ಟ್ ಮಾಡ್ತಾರಾ? ಅಥವಾ ವಿವರವಾದ ತನಿಖೆ ನಡೆಯುತ್ತಾ? ಎನ್ನುವ ಕುತೂಹಲ ಎಲ್ಲರಲ್ಲಿದೆ.

Related Video