ದೇವಸ್ಥಾನಕ್ಕೆ ಹೋಗಬೇಡಿ, ದೇವರು ಕಸಕ್ಕೆ ಸಮಾನ, ವಿರಕ್ತಮಠದ ವೀರತಿಶಾನಂದ ಸ್ವಾಮೀಜಿ ವಿವಾದ!
ನಾವು ಹಿಂದೂಗಳಲ್ಲ, ಯಾರೂ ದೇವಸ್ಥಾನಕ್ಕೆ ಹೋಗಬೇಡಿ. ದೇವರೆಲ್ಲಾ ನಮಗೆ ಕಸಕ್ಕೆ ಸಮಾನ ಎಂದು ಮನಗೂಳಿ ವಿರಕ್ತಮಠದ ವೀರತಿಶಾನಂದ ಸ್ವಾಮೀಜಿ ಹೇಳಿದ್ದಾರೆ.
ಅಂಬೇಡ್ಕರ್ ವಿರುದ್ಧ ಅಮಿತ್ ಶಾ ಆಡಿದ ಮಾತು ವಿರೋಧಿಸಿ ವಿಜಯಪುರದಲ್ಲಿ ಬಂದ್ ಆಚರಿಸಲಾಗಿದೆ. ಈ ಬಂದ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಮನಗೂಳಿ ವಿರಕ್ತಮಠದ ವೀರತಿಶಾನಂದ ಸ್ವಾಮೀಜಿ ಮಾತುಗಳು ಇದೀಗ ಭಾರಿ ಚರ್ಚೆಯಾಗುತ್ತಿದೆ. ಅಂಬೇಡ್ಕರ್ ಅನ್ನೋದು ಒಂದು ಪ್ಯಾಷನ್ ಆಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.ಅಂಬೇಡ್ಕರ್ ನಮಗೆ ಪರಮಾತ್ಮ ಇದ್ದಂಗೆ. ಅಂಬೇಡ್ಕರ್ ಅನ್ನೋದೇ ನಮ್ಮ ಮಂತ್ರ ಎಂದು ಸ್ವಾಮೀಜಿ ಹೇಳಿದ್ದಾರೆ. ಇದೇ ವೇಳೆ ನಾವು ಹಿಂದೂಗಳಲ್ಲ, ವೈದಿಕೆ ಧರ್ಮ ಆಚರಣೆ ನಮ್ಮದಲ್ಲ ಎಂದಿದ್ದಾರೆ. ನಮಗೆ ಯಾರು ದೇವರಿಲ್ಲ. ದೇವರೆಲ್ಲ ನಮಗೆ ಕಸದ ಸಮಾನ. ಗಣಪತಿ ಕೂಡಿಸೋಕೆ ಹಣ ಕೇಳಿದಕ್ಕೆ ನಾನು ಕೊಡಲಿಲ್ಲ.ತೀರ್ಥಕ್ಷೇತ್ರಗಳಿಗೆ ಪ್ರವಾಸಕ್ಕೆ ಹೋಗಬೇಡಿ ಎಂದು ಸೂಚನೆ ನೀಡಿದ್ದಾರೆ.