ಜಾತಿ ಗಣತಿ ವರದಿ ಬಿಡುಗಡೆ ಸಿಎಂ ಸಿದ್ದರಾಮಯ್ಯ ಒಲವು, ಡಿಕೆ ಶಿವಕುಮಾರ್ ವಿರೋಧ!

ಸಿದ್ದರಾಮಯ್ಯ ಸರ್ಕಾರಕ್ಕೆ ಜಾತಿಗಣತಿ ಸಂಕಷ್ಟ, ಜಾತಿ ಗಣತಿ ದೋಷಪೂರಿತ, ಒಕ್ಕಲಿಗ ಸಂಘದಿಂದ ಭಾರಿ ವಿರೋಧ, ಅವರ್ ಬಿಟ್, ಇವರ್ ಬಿಟ್ ಸತೀಶ್ ಜಾರಕಿಹೊಳಿಗ ಸಿಎಂ ಎಂದ ಶಾಸಕ ಸೇರಿದಂತೆ ಇಂದಿನ ಇಡಿ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಸಿದ್ದರಾಮಯ್ಯ ಸರ್ಕಾರಕ್ಕೆ ಜಾತಿಗಣತಿ ಸಂಕಷ್ಟ ಎದುರಾಗಿದೆ. ಕಾಂತರಾಜು ವರದಿ ಸ್ವೀಕರಿಸದಂತೆ ಒಕ್ಕಲಿಗರ ಸಂಘ ಸಿಎಂಗೆ ಪತ್ರ ಬರೆದಿದೆ. ಈ ಪತ್ರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಸಹಿ ಹಾಕಿದ್ದಾರೆ. ಇದು ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಜಾತಿ ಗಣತಿ ವರದಿ ದೋಷಪೂರಿತವಾಗಿದೆ ಎಂದು ಒಕ್ಕಲಿಗರ ಸಂಘ ಪತ್ರದಲ್ಲಿ ಹೇಳಿದೆ. ಆದರೆ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿ ಬಿಡುಗಡೆ ಮಾಡಲು ಮಂದಾಗಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಟ್ವೀಟ್ ಮಾಡಿ ಸಂಚಲನ ಸೃಷ್ಟಿಸಿದ್ದಾರೆ. ಜಾತಿ ಗಣತಿ ಜೊತೆಗೆ ರಾಜ್ಯದಲ್ಲಿ ದತ್ತಮಾಲೆ ವಿಚಾರವೂ ಬಾರಿ ಸದ್ದು ಮಾಡುತ್ತಿದೆ.

Related Video