Asianet Suvarna News Asianet Suvarna News

ಪಿಪಿಇ ಕಿಟ್ ಧರಿಸಿ ಓಡಾಡುತ್ತಿರುವ ಮಾನಸಿಕ ಅಸ್ವಸ್ಥ; ಸಾರ್ವಜನಿಕರಿಗೆ ಆತಂಕವೂ ಆತಂಕ..!

Jul 12, 2020, 3:50 PM IST

ವಿಜಯಪುರ (ಜು. 12):  ಪಿಪಿಇ ಕಿಟ್‌ನ್ನು ಎಲ್ಲೆಂದರಲ್ಲಿ ಸಿಬ್ಬಂದಿಗಳು ಎಸೆದು ಹೋಗಿದ್ದು ಅದನ್ನು  ಮಾನಸಿಕ ಅಸ್ವಸ್ಥನೊಬ್ಬ ಧರಿಸಿ ಓಡಾಡುತ್ತಿದ್ದಾನೆ. ಇದರಿಂದಲೇ ಸೋಂಕು ನಗರದಲ್ಲಿ ಇನ್ನಷ್ಟು ಹೆಚ್ಚಾಗುತ್ತಿದೆ ಎನ್ನಲಾಗಿದೆ. 

ಯಾವಾಗ ಮುಗಿಯುತ್ತೆ ಮಹಾಮಾರಿ ಕೊರೋನಾ ಕಾಟ..? ಇಲ್ಲಿದೆ ಉತ್ತರ

ಸಿಬ್ಬಂದಿಗಳ ಪಿಪಿಇ ಕಿಟ್‌ನ್ನು ಸರಿಯಾದ ರೀತಿಯಲ್ಲಿ ಡಿಸ್ಪೋಸ್ ಮಾಡಬೇಕು. ಆದರೆ ಬೇಜವಾಬ್ದಾರಿಯಿಂದ ಸ್ಮಶಾನದ ಬಳಿ ಎಸೆದು ಹೋಗಿದ್ದಾರೆ. ಮಾನಸಿಕ ಅಸ್ವಸ್ಥ ಅದನ್ನ ಧರಿಸಿ ಆರಾಮಾಗಿ ಓಡಾಡಿಕೊಂಡು ಇದ್ದಾನೆ. ಈತನನ್ನು ನೋಡಿ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಬರುತ್ತೇವೆ ಅನ್ನುತ್ತಾರೆಯೇ ವಿನಃ ಸ್ಥಳಕ್ಕೆ ಧಾವಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.