ವರ್ತೂರು ಪ್ರಕಾಶ್‌ಗೆ ಮತ್ತೊಂದು ಮಹಾ ಸಂಕಷ್ಟ: ಸ್ಫೋಟಕ ಸತ್ಯ ಬಾಯಿಬಿಟ್ಟ ಶ್ವೇತಾ ಗೌಡ
ಚಿನ್ನದ ಹಗರಣದಲ್ಲಿ ಬಂಧಿತರಾಗಿರುವ ಶ್ವೇತಾ ಗೌಡ, ಮಾಜಿ ಸಚಿವ ವರ್ತೂರು ಪ್ರಕಾಶ್ ತಮ್ಮ ರಾಜಕೀಯ ಎದುರಾಳಿಯನ್ನು ಮಣಿಸಲು ತನ್ನನ್ನು ಬಳಸಿಕೊಂಡರು ಎಂದು ಆರೋಪಿಸಿದ್ದಾರೆ. ಕೋಲಾರದ ಬಿಜೆಪಿ ನಾಯಕನ ಮೇಲೆ ಹನಿಟ್ರ್ಯಾಪ್ ಮಾಡಲು ಸಂಚು ರೂಪಿಸಿದ್ದಾಗಿ ಶ್ವೇತಾ ಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹಲವು ಚಿನ್ನಾಭರಣ ಮಳಿಗೆಗಳಿಗೆ ಚಿನ್ನವನ್ನು ಪಡೆದು ಹಣ ಕೊಡದೇ ವಂಚನೆ ಮಾಡಿದ ಪ್ರಕರಣದಲ್ಲಿ ಬಂಧನವಾಗಿರುವ ಶ್ವೇತಾ ಗೌಡ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಕುರಿತ ಸಂಬಂಧಿಸಿದಂತೆ ಭಾರೀ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.
ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು ತಮ್ಮ ರಾಜಕೀಯ ಎದುರಾಳಿಯನ್ನು ಮಣಿಸುವುದಕ್ಕೆ ತನ್ನ ಫೇಸ್‌ಬುಕ್ ಗೆಳತಿ ಶ್ವೇತಾ ಗೌಡಳನ್ನು ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ವರ್ತೂರು ಪ್ರಕಾಶ್ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿನ್ನದ ಹಗರಣದಲ್ಲಿ ಸಿಲುಕಿಕಂಡಿರುವ ಶ್ವೇತಾ ಗೌಡ ನನಗೆ ಪರಿಚಯವೇ ಇಲ್ಲ ಎಂದು ಹೇಳುತ್ತಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ ಡಬಲ್ ಗೇಮ್ ಆಡುತ್ತಿರುವುದು ಈಗಾಗಲೇ ಬೆಳಕಿಗೆ ಬಂದಿದೆ. ಇದೀಗ ವರ್ತೂರು ಪ್ರಕಾಶ್ ಅವರ ಇನ್ನೊಂದು ಬಣ್ಣವನ್ನು ಶ್ವೇತಾ ಗೌಡ ಬಯಲು ಮಾಡಿದ್ದಾರೆ.
ಇದನ್ನೂ ಓದಿ: ದಾಸನ ಗೆಳತಿ ಪವಿತ್ರಾ ಗೌಡ ಜೊತೆಗೆ ಲಿಂಕ್ ಹೊಂದಿದ್ದ ವರ್ತೂರು ಪ್ರಕಾಶ್‌ನ ಚಿನ್ನದ ರಾಣಿ ಶ್ವೇತಾ ಗೌಡ!
ಕೋಲಾರದಲ್ಲಿ ರಾಜಕೀಯ ಎದುರಾಳಿ ಆಗಿದ್ದ ಬಿಜೆಪಿ ನಾಯಕನ ಬಳಿ ಸಾಕಷ್ಟು ಹಣವಿದ್ದು, ಆತನ ಮೇಲೆ ಗೋಲ್ಡ್ ಇನ್ವೆಸ್ಟ್ ಮಾಡು ಎಂದು ವರ್ತೂರು ಪ್ರಕಾಶ್ ಶ್ವೇತಾಗೌಡಗೆ ಹೇಳಿದ್ದರು. ಈ ಮೂಲಕ ಶ್ವೇತಾ ಗೌಡ ಕೋಲಾರದ ನಾಯಕನನ್ನು ಹನಿಟ್ರ್ಯಾಪ್ ಮಾಡಲು ಸಂಚು ರೂಪಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
2023ರ ವಿಧಾನ ಸಭಾ ಚುನಾವಣೆಯಲ್ಲಿ ವರ್ತೂರು ಪ್ರಕಾಶ್‌ಗೆ ಯಾಕೆ ಟಿಕೆಟ್ ಕೊಡುತ್ತೀರಿ ಎಂದು ಕೋಲಾರದ ಬಿಜೆಪಿ ನಾಯಕ ಓಂ ಚಲಪತಿ ಹೈಕಮಾಂಡ್‌ಗೆ ಪ್ರಶ್ನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜಕೀಯ ವಿರೋಧಿಯನ್ನು ಹಣಿಯಲು ಶ್ವೇತಾ ಗೌಡಳನ್ನು ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲಿಯೇ ಶ್ವೇತಾ ಗೌಡ ಬಿಜೆಪಿ ಮುಖಂಡ ಓಂ ಚಲಪತಿ ಅವರನ್ನು ಭೇಟಿ ಮಾಡಿದ್ದಳು. ಆಗ ಓಂ ಚಲಪತಿ ಅವರ ಹೆಸರನ್ನು ಮೈಸೂರ್ ಪಾಕ್ ಎಂದೂ ಸೇವ್ ಮಾಡಿಕೊಂಡಿದ್ದರು.