ಜನರಿಗೆ ಮೋದಿ ಬಗ್ಗೆ ವಿಶ್ವಾಸ, ಅಭಿವೃದ್ಧಿ ಕಾರ್ಯ, ಉತ್ತರಾಖಂಡ್‌ನಲ್ಲಿ ಗೆದ್ದೆವು: ಪ್ರಹ್ಲಾದ್ ಜೋಶಿ

ಉತ್ತರಾಖಂಡದಲ್ಲಿ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹಾಗೂ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಮತದಾರರು ಮನ್ನಣೆ ನೀಡಿದ್ದಾರೆ ಎಂದು ಆ ರಾಜ್ಯದ ಚುನಾವಣಾ ಉಸ್ತುವಾರಿ ಆಗಿದ್ದ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಉತ್ತರಾಖಂಡದಲ್ಲಿ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹಾಗೂ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಮತದಾರರು ಮನ್ನಣೆ ನೀಡಿದ್ದಾರೆ ಎಂದು ಆ ರಾಜ್ಯದ ಚುನಾವಣಾ ಉಸ್ತುವಾರಿ ಆಗಿದ್ದ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಚುನಾವಣೆ ಬಳಿಕ ಉತ್ತರಾಖಂಡದಲ್ಲಿ ಪಕ್ಷ 42-44 ಸ್ಥಾನ ಗೆಲ್ಲುವುದಾಗಿ ರಾಷ್ಟ್ರೀಯ ನಾಯಕರಿಗೆ ಲಿಖಿತವಾಗಿ ವರದಿ ನೀಡಿದ್ದೆ. ಅದರಂತೆ ಸ್ಪಷ್ಟಬಹುತದೊಂದಿಗೆ ಮತ್ತೆ ಅಧಿಕಾರ ಹಿಡಿದ್ದೇವೆ. ಈ ಫಲಿತಾಂಶದ ಬಗ್ಗೆ ನಮಗೆ ಯಾವುದೇ ಗೊಂದಲ ಇರಲಿಲ್ಲ. ಉತ್ತರಾಖಂಡದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವಿಶ್ವಾಸವಿತ್ತು. ಇದರ ಜತೆಗೆ ಒಳ್ಳೆಯ ತಂತ್ರಗಳೊಂದಿಗೆ ಈ ಚುನಾವಣೆ ಎದುರಿಸಿದ್ದೆವು ಎಂದರು.

ಚುನಾವಣಾ ಪೂರ್ವದಲ್ಲಿ ಉತ್ತರಾಖಂಡದಾದ್ಯಂತ ಗರಿಷ್ಠ 100 ಜನರ ಸುಮಾರು 1.10 ಲಕ್ಷ ಸಣ್ಣ ಸಭೆ ಮಾಡಲು ಯೋಜನೆ ರೂಪಿಸಿದ್ದೆವು. ಆದರೆ, ಹವಾಮಾನ ಏರುಪೇರುಗಳಿಂದ ಕೇವಲ 80 ಸಾವಿರ ಸಭೆಗಳನ್ನು ಮಾತ್ರ ಮಾಡಿದ್ದೆವು. ಕಳೆದ ಐದು ವರ್ಷಗಳಲ್ಲಿ ಮೂರು ಜನ ಮುಖ್ಯಮಂತ್ರಿಗಳು ಬದಲಾವಣೆಯಾದರೂ ಏನೆಲ್ಲಾ ಕೆಲಸಗಳನ್ನು ಮಾಡಲಾಗಿದೆ ಎಂಬುದನ್ನು ಈ ಸಭೆಗಳಲ್ಲಿ ಜನರಿಗೆ ತಿಳಿಸಿದ್ದೆವು. ಇನ್ನು ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ದಾಮಿ ಅವರು ತಮ್ಮ ಆರು ತಿಂಗಳ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದರು. ಪುಷ್ಕರ ಸಿಂಗ್‌ ಚಹರೆ ಅಲ್ಲಿನ ಜನರಿಗೆ ಇಷ್ಟವಾಗಿತ್ತು ಎಂದು ಹೇಳಿದರು.

Related Video