ದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಿದ ಸದಾನಂದ ಗೌಡರು ಕ್ವಾರಂಟೈನ್ ಆಗ್ತಾರಾ?
ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ| ಎರಡು ತಿಂಗಳ ಬಳಿಕ ಬೆಂಗಳೂರಿಗೆ ಬಂದ ಡಿ. ವಿ. ಸದಾನಂದಗೌಡ| ಹೊಂ ಕ್ವಾರಂಟೈನ್ ಆಗುವ ಮೂಲಕ ಇತರರಿಗೆ ಮಾದರಿಯಾದ ಕೇಂದ್ರ ಸಚಿವ|
ಬೆಂಗಳೂರು(ಮೇ.25): ದೆಹಲಿಯಿಂದ ಬೆಂಗಳೂರಿಗೆ ಬಂದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ದಿನ 7 ಹೋಂ ಕ್ವಾರಂಟೈನ್ ಆಗಲು ನಿರ್ಧರಿಸಿದ್ದಾರೆ. ಸುಮಾರು ಎರಡು ತಿಂಗಳ ಬಳಿಕ ಸದಾನಂದಗೌಡ ಅವರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಇಂದು ಬೆಳಿಗ್ಗೆ(ಸೋಮವಾರ) ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಧಾರವಾಡಕ್ಕೆ ಹೊರ ರಾಜ್ಯ ಪ್ರಯಾಣಿಕರ ಟೆನ್ಷನ್..!
ಸರ್ಕಾರಿ ನೌಕರರು, ಸಚಿವರು ಸೇರಿದಂತೆ ಅಗತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಂತವರಿಗೆ ಕ್ವಾರಂಟೈನ್‌ನಿಂದ ವಿನಾಯಿತಿ ಇದೆ. ಆದರೆ, ಸಚಿವ ಸದಾನಂದಗೌಡ ಅವರು ಈ ವಿನಾಯಿತಿಯನ್ನ ಬಳಸಿಕೊಳ್ಳದೆ ಹೊಂ ಕ್ವಾರಂಟೈನ್ ಆಗುವ ಮೂಲಕ ಮಾದರಿಯಾಗಿದ್ದಾರೆ.