ಕೇಂದ್ರದ ಜಾರಿ ನಿರ್ದೇಶನಾಲಯ ಮತ್ತು ರಾಜ್ಯ ಸರ್ಕಾರದ ನಡುವೆ ಶುರುವಾಯ್ತು ಹೊಸ ಸಂಘರ್ಷ!

ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ರಾಜ್ಯ ಸರ್ಕಾರದ ನಡುವೆ ಹೊಸ ಸಂಘರ್ಷ ಶುರುವಾಗಿದೆ.

First Published Jul 24, 2024, 6:32 PM IST | Last Updated Jul 24, 2024, 6:32 PM IST

ಬೆಂಗಳೂರು (ಜು.24): ಕೇಂದ್ರ ತನಿಖಾ ಸಂಸ್ಥೆ Vs ರಾಜ್ಯ ಸರ್ಕಾರದ ಮಧ್ಯೆ ಮಹಾ ಸಂಘರ್ಷ.. ! ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಸಿಲುಕಿಸಲು ಇ.ಡಿ ಪ್ರಯತ್ನಿಸ್ತಾ ಇದ್ಯಾ..? ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳ ವಿರುದ್ಧವೇ ಪ್ರಕರಣ ದಾಖಲಿಸಿದ ರಾಜ್ಯ ಸರ್ಕಾರದ ಅಧಿಕಾರಿ..! ಎಫ್ಐಆರ್ ಬೆನ್ನಲ್ಲೇ ಅಖಾಡಕ್ಕಿಳಿದ ಕಾಂಗ್ರೆಸ್, ವಿಧಾನಸೌಧದಲ್ಲಿ ಭಾರೀ ಪ್ರತಿಭಟನೆ.. ಮುಖ್ಯಮಂತ್ರಿ ವಿರುದ್ಧ ಷಡ್ಯಂತ್ರ ಅಂತ ಕಾಂಗ್ರೆಸ್ ಆರೋಪಿಸಿದ್ದೇಕೆ..? ಇ.ಡಿ Vs ಸರ್ಕಾರ, ಬಂಗಾಳದ ದೀದಿ ಮಾದರಿಯಲ್ಲೇ ರಾಜ್ಯದಲ್ಲೂ ನಡೆಯುತ್ತಾ ಜಟಾಪಟಿ..? ಇದೇ ಇವತ್ತಿನ ಸುವರ್ಣ ಸ್ಪೆಷಲ್..

ಇಬ್ಬರು ಇ.ಡಿ ಅಧಿಕಾರಿಗಳ ವಿರುದ್ಧ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹಾಗಾದ್ರೆ ಇ.ಡಿ ಅಧಿಕಾರಿಗಳಾದ ಮನೋಜ್ ಮಿತ್ತಲ್ ಹಾಗೂ ಮುರುಳಿ ಕಣ್ಣನ್ ಅರೆಸ್ಟ್ ಆಗ್ತಾರಾ..? ಇದು ಇ.ಡಿ Vs ಸರ್ಕಾರದ ಸಂಘರ್ಷ.. ಸಿಎಂ ಸಿದ್ದರಾಮಯ್ಯ ವಿರುದ್ಧ ಇ.ಡಿ ಸಂಚು ಅಂತ ಕಾಂಗ್ರೆಸ್ ಆರೋಪ.. ಇದ್ರ ಬೆನ್ನಲ್ಲೇ ಇ.ಡಿ ಅಧಿಕಾರಿಗಳ ವಿರುದ್ಧವೇ ಎಫ್ಐಆರ್ ದಾಖಲು.. ಹಾಗಾದ್ರೆ ವಾಲ್ಮೀಕಿ ನಿಗಮದ ಅಕ್ರಮದ ತನಿಖೆ ನಡೆಸ್ತಾ ಇರೋ ಇ.ಡಿ ಅಧಿಕಾರಿಗಳಾದ ಮನೋಜ್ ಮಿತ್ತಲ್ ಹಾಗೂ ಮುರುಳಿ ಕಣ್ಣನ್ ಅರೆಸ್ಟ್ ಆಗ್ತಾರಾ..? ಎನ್ನುವುದು ಕುತೂಹಲ ಮೂಡಿಸಿದೆ.

ಇನ್ನು ಎಫ್ಐಆರ್ ಆಗಿದ್ರೂ ಇ.ಡಿ ಅಧಿಕಾರಿಗಳನ್ನು ಪೊಲೀಸ್ರು ಬಂಧಿಸೋ ಹಾಗಿಲ್ಲ, ವಿಚಾರಣೆ ನಡೆಸೋ ಹಾಗೂ ಇಲ್ಲ. ಜೊತೆಗೆ, ಅವ್ರನ್ನು ವಿಚಾರಣೆ ನಡೆಸೋ ಹಾಗೂ ಇಲ್ಲ, ಅರೆಸ್ಟ್ ಮಾಡೋ ಹಾಗೂ ಇಲ್ಲ. ಕಾರಣ, ಪ್ರಕರಣಕ್ಕೆ ಸಿಕ್ಕಿರೋ ಮತ್ತೊಂದು ತಿರುವು. ಕೇಂದ್ರೀಯ ತನಿಖಾ ಸಂಸ್ಥೆ Vs ರಾಜ್ಯ ಸರ್ಕಾರ ಸಂಘರ್ಷ. ಕಾನೂನಿನ ಮೂಲಕ ಇ.ಡಿಗೆ ಟಕ್ಕರ್ ಕೊಡಲು ಹೊರಟಿದ್ದ ರಾಜ್ಯ ಸರ್ಕಾರಕ್ಕೆ ಕಾನೂನು ಅಸ್ತ್ರದ ಮೂಲಕವೇ ಇ.ಡಿ ತಿರುಗೇಟು ಕೊಟ್ಟಿದೆ. ಈ ಸಂಘರ್ಷ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಹೋಗಿ ತಲುಪಲಿದೆ ಅನ್ನೋದನ್ನು ಕಾದು ನೋಡೋಣ.