Asianet Suvarna News Asianet Suvarna News

ಉಡುಪಿ ಫೈಲ್ಸ್‌, 'ಮಕ್ಕಳಾಟ' ಎಂದ ಕಾಂಗ್ರೆಸ್‌, ಗೃಹ ಸಚಿವರಿಗೆ ಇದು 'ಸಣ್ಣ ಘಟನೆ'!


ಉಡುಪಿ ವಿಡಿಯೋ ವಿವಾದವನ್ನು ಕಾಂಗ್ರೆಸ್‌ ಪಕ್ಷ ತನ್ನ ಟ್ವೀಟ್‌ನಲ್ಲಿ ಮಕ್ಕಳಾಟ ಎಂದು ಕರೆದಿರುವುದು ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್‌ 'ಸಣ್ಣ ಘಟನೆ' ಎಂದು ಕರೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
 

ಬೆಂಗಳೂರು (ಜು.26): ಉಡುಪಿ ಕಾಲೇಜಿನ ಶೌಚಾಲಯದ ವಿಡಿಯೋ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಮುಸ್ಲಿಂ ವಿದ್ಯಾರ್ಥಿನಿಯರ ಹಿಂದೆ ಸಂಘಟನೆಗಳ ಪಾತ್ರವಿದೆಯೇ ಎನ್ನುವ ಅನುಮಾನ ಕಾಡಿದೆ. ಇದರ ನಡುವೆ ಬಿಜೆಪಿ ನಾಯಕರು ಸಾಲು ಸಾಲು ಆರೋಪ ಮಾಡಿದ್ದಾರೆ.

ಉಡುಪಿಯಲ್ಲಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ವಿವಾದವನ್ನು ಸಣ್ಣ ಘಟನೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಕರೆದಿರುವುದು ಕೂಡ ಆಕ್ರೋಶಕ್ಕೆ ಕಾರಣವಾಗಿದೆ. ಇದಲ್ಲದೆ ಕಾಂಗ್ರೆಸ್‌ ಪಕ್ಷ ತನ್ನ ಟ್ವಿಟರ್‌ನಲ್ಲಿ ಇದನ್ನು ವಿದ್ಯಾರ್ಥಿನಿಯರ ನಡುವಿನ ಮಕ್ಕಳಾಟ ಎಂದು ಕರೆದಿರುವುದಕ್ಕೆ ಜನತೆ ಕಿಡಿಕಾರಿದೆ.

'ದೇವಸ್ಥಾನದ ಎದುರಲ್ಲೇ ಹಿಂದುಗಳನ್ನ ನೇಣಿಗೆ ಹಾಕ್ತೇವೆ' ಕೇರಳ ಮುಸ್ಲಿಂ ಲೀಗ್‌ ಜಾಥಾದಲ್ಲಿ ಘೋಷಣೆ!

ಈ ನಡುವೆ ಭಾರೀ ಒತ್ತಡದ ಬಳಿಕ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದರೆ. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ವಿವಾದಕ್ಕೆ ಎಂಟ್ರಿಯಾಗಿದೆ.  ಮಹಿಳಾ ಆಯೋಗದ ಸದಸ್ಯೆ ಖುಷ್ಭೂ ಸುಂದರ್‌ ಉಡುಪಿಗೆ ಭೇಟಿ ನೀಡಿದ್ದಾರೆ.