’ಇಬ್ಬರು 'ಚಾಡಿಕೋರ' ಕೇಂದ್ರ ಸಚಿವರಿಂದ ಬಿಎಸ್‌ವೈ ಮುಗಿಸಲು ಯತ್ನ’

ಮೋದಿ ಬಳಿ ಜನರ ಭಾವನೆ ಹೇಳಿಕೊಳ್ಳಲು ನಾನು ಹೆದರಲ್ಲ| ನನ್ನನ್ನು ಪಕ್ಷದಿಂದ ಹೊರ ಹಾಕಿದರೆ ನನಗೇನೂ ಹಾನಿಯಿಲ್ಲ| ನನ್ನ ಶಕ್ತಿಯನ್ಮು ವಿಧಾನ ಪರಿಷತ್ ನಲ್ಲಿ ತೋರಿಸಿದ್ದೇನೆ| ನಾನು ಬಿಜೆಪಿ ಸೇರುವಾಗ ಇವರೇನೂ ಸ್ವಾಗತಿಸಿಲ್ಲ| ನನ್ನ ಶಕ್ತಿ ನೋಡಿ ಅಮಿತ್ ಶಾ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ

First Published Oct 9, 2019, 2:02 PM IST | Last Updated Oct 9, 2019, 2:23 PM IST

ವಿಜಯಪುರ[ಅ.09]: ಶೋಕಾಸ್ ನೋಟಿಸ್ ಬಳಿಕವೂ ಬಿಜೆಪಿ ಶಾಸಕ ಯತ್ನಾಳ್ ಮತ್ತೆ ಗುಡುಗಿದ್ದಾರೆ. ಕರ್ನಾಟಕದ ಇಬ್ಬರು ಕೇಂದ್ರ ಸಚಿವರು ಬಿಎಸ್ ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ನನಗೆ ದೆಹಲಿಯಿಂದ ಮಾಹಿತಿ ಸಿಕ್ಕಿದೆ ಎಂದು ಬಾಂಬ್ ಸಿಡಿಸಿದ್ದಾರೆ. 

ನಾನು ಹೇಳಿಕೆ ನೀಡಿದ ಮೇಲೆ ಇಬ್ಬರು ಸಚಿವರು ದೆಹಲಿಗೆ ಹೋಗಿದ್ದರು. ಅವರು ಪರಿಹಾರ ತರಲು ಹೋಗಿರಲಿಲ್ಲ, ನೋಟಿಸ್ ಕೊಡಿಸಲು ಹೋಗಿದ್ರು. ಇಂಥಾ ಚಾಡಿಕೋರ ಸಚಿವರಿಂದ ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ನಡೆ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಭೇಟಿಗೆ ಮಮತಾ ಬ್ಯಾನರ್ಜಿ ಅವಕಾಶ ಕಲ್ಪಿಸಲಾಗುತ್ತಿದೆ. ರಾಜ್ಯದ ಸಚಿವರಿಬ್ಬರ ಕುತಂತ್ರದಿಂದ ಬಿಎಸ್‌ವೈ ಭೇಟಿಗೆ ಅವಕಾಶ ನೀಡಿಲ್ಲ. ನಿಮಗೆ ಅಸಮಾಧಾವಿದ್ದರೆ ವಯಸ್ಸಾಗಿದೆ ಎಂದು ಸಿಎಂ ರಾಜೀನಾಮೆ ಪಡೆದುಕೊಳ್ಳಲಿ ಎಂದಿದ್ದಾರೆ.