ವ್ಯಾಲೆಂಟೈನ್ ಡೇಗೆ 5 ದಿನದ ರಜಾ ಅರ್ಜಿ ವೈರಲ್, ವಿದ್ಯಾರ್ಥಿಯೇ ಕೊಟ್ಟ ಟ್ವಿಸ್ಟ್..!

ಹುಡುಗಿಯರ ಕಾಟ ತಾಳಲಾರದೆ ಫೆಬ್ರುವರಿ 14 ರವರೆಗೆ ಐದು ದಿನಗಳ ಕಾಲ ರಜೆ ಬೇಕೆಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಕೇಳಿರುವ ರಜಾ ಅರ್ಜಿ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 12): ಹುಡುಗಿಯರ ಕಾಟ ತಾಳಲಾರದೆ ಫೆಬ್ರುವರಿ 14 ರವರೆಗೆ ಐದು ದಿನಗಳ ಕಾಲ ರಜೆ ಬೇಕೆಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಕೇಳಿರುವ ರಜಾ ಅರ್ಜಿ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. 

ಹುಡುಗಿಯರ ಕಾಟಕ್ಕೆ ಬೇಸತ್ತು ವ್ಯಾಲಂಟೈನ್ಸ್ ಡೇಗೆ ರಜೆ ಬೇಕೆಂದು ಪ್ರಾಂಶುಪಾಲರಿಗೆ ಪತ್ರ ಬರೆದ ವಿದ್ಯಾರ್ಥಿ..!

ಇನ್ನೊಂದು ವಿಶೇಷ ಎಂದರೆ ಈ ರಜಾ ಅರ್ಜಿ ಮೇಲೆ ಪ್ರಾಂಶುಪಾಲರ ಸೀಲು ಹಾಗು ಸಹಿಯೂ ಇದ್ದು ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ. ಈ ಪತ್ರಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ವಿದ್ಯಾರ್ಥಿ ಶಿವರಾಜ್ ವಿಕ್ಟರ್ ಸ್ಪಷ್ಟಪಡಿಸಿದ್ದಾನೆ. ಯಾರೋ ನನ್ನನ್ನ ಹೀಯಾಳಿಸಲು, ಹಾಸ್ಯ ಮಾಡಲು ಈ ರೀತಿ ಪತ್ರ ಸೃಷ್ಟಿ ಮಾಡಿದ್ದಾರೆ. ಈ ಪತ್ರ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ನನಗೆ ಮಾನಸಿಕವಾಗಿ ನೋವಾಗಿದೆ. ನಮ್ಮ ಕಾಲೇಜಿನ ಪ್ರಾಂಶುಪಾಲರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ವಿದ್ಯಾರ್ಥಿ ಕೋರಿಕೊಂಡಿದ್ದಾನೆ.

Related Video