Asianet Suvarna News Asianet Suvarna News

ಶಿವಾಜಿ ಕಾಲದ ಸುರಂಗ ಮಾರ್ಗ ಪತ್ತೆ, ಯಾವ ಎಂಜಿನೀಯರ್‌ಗೂ ಕಮ್ಮಿಯಿಲ್ಲ ಮಹಾರಾಜರ ಪರಿಕಲ್ಪನೆ!

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿ‌ನ‌ ಹರಗಾಪುರ ಗಡಾ ಗ್ರಾಮದಲ್ಲಿ ಹಳೆಯ ಸುರಂಗ ಮಾರ್ಗ ಪತ್ತೆಯಾಗಿದೆ.  ಹರಗಾಪುರ ಗ್ರಾಮದಲ್ಲಿ ರಸ್ತೆ ಕಾಮಗಾರಿ ಮಾಡುವ ಸಂದರ್ಭದಲ್ಲಿ ಈ ಟನಲ್ ಪತ್ತೆಯಾಗಿದ್ದು, ಸದ್ಯ ಎಲ್ಲರ ಕುತೂಹಲ ಹೆಚ್ಚುವಂತೆ ಮಾಡಿದೆ. 

ಬೆಳಗಾವಿ (ಏ. 07):  ಹುಕ್ಕೇರಿ ತಾಲೂಕಿ‌ನ‌ ಹರಗಾಪುರ ಗಡಾ ಗ್ರಾಮದಲ್ಲಿ ಹಳೆಯ ಸುರಂಗ ಮಾರ್ಗ ಪತ್ತೆಯಾಗಿದೆ.  ಹರಗಾಪುರ ಗ್ರಾಮದಲ್ಲಿ ರಸ್ತೆ ಕಾಮಗಾರಿ ಮಾಡುವ ಸಂದರ್ಭದಲ್ಲಿ ಈ ಟನಲ್ ಪತ್ತೆಯಾಗಿದ್ದು, ಸದ್ಯ ಎಲ್ಲರ ಕುತೂಹಲ ಹೆಚ್ಚುವಂತೆ ಮಾಡಿದೆ. ಈ ಟನಲ್ ಪರಿಕಲ್ಪನೆ ನಮ್ಮ ರಾಜ ಮಹಾರಾಜರಿಗೆ ಮೊದಲೇ ಇತ್ತು ಎಂಬುವುದಕ್ಕೆ ಸಾಕ್ಷಿ ಮತ್ತೊಂದು ಪುರಾವೆ ಸಿಕ್ಕಿದೆ. 

ಹಳೇ ವಿದ್ಯಾರ್ಥಿಗಳಿಂದ ಶಾಲೆಗೆ ಹೊಸ ರಂಗು, ಮಾದರಿಯಾಯ್ತು ಯುವಕರ ಈ ಕೆಲಸ!

ಈಗ ಪತ್ತೆಯಾಗಿರುವ ಈ ಟನಲ್ ಹರಗಾಪುರ ಗ್ರಾಮದಿಂದ 8 ಕೀಮಿ ದೂರವಿರುವ ಸಂಕೇಶ್ವರ ಪಟ್ಟಣದ ಶಂಕರಲಿಂಗ ದೇವಸ್ಥಾನ ಹಾಗೂ ಮಹಾರಾಷ್ಟ್ರದ ಸಮಾನ್ಯಘಢ ಎಂಬ ಪ್ರದೇಶಕ್ಕೆ ಸಂಪರ್ಕ ಬೆಳೆಸುತ್ತೆ ಎನ್ನುತ್ತಿದ್ದಾರೆ ಇತಿಹಾಸ ತಜ್ಞರು. ಅಪರೂಪದ ಈ ಟನಲನ್ನು ಸಂರಕ್ಷಿಸಬೇಕು ಎನ್ನುವುದು ಇತಿಹಾಸ ತಜ್ಞರು ಹಾಗೂ ಸ್ಥಳೀಯರ ಒತ್ತಾಯ.