ಕಣ್ಣೆದುರೇ ಹರಿದು ಹೋಗ್ತಿದೆ 240 ಟಿಎಂಸಿ ನೀರು! ಡ್ಯಾಂ ಗೇಟ್ ದುರಸ್ತಿ ಮಾಡದೆ ಅಧಿಕಾರಿಗಳ ನಿರ್ಲಕ್ಷ್ಯ!

ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿ, ಗೇಟ್ ದುರಸ್ತಿಯಾಗದೆ ಸಾಮರ್ಥ್ಯ ಕುಗ್ಗಿದೆ. 20 ಟಿಎಂಸಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದು, ರೈತರಲ್ಲಿ ಆತಂಕ ಮೂಡಿದೆ. ಕಳೆದ ವರ್ಷ ಕಿತ್ತು ಹೋದ ಕ್ರಿಸ್ಟ್ ಗೇಟ್ ಇನ್ನೂ ಸರಿಪಡಿಸದಿರುವುದು ಸಮಸ್ಯೆಗೆ ಕಾರಣ.

Share this Video
  • FB
  • Linkdin
  • Whatsapp

ಮಧ್ಯ ಕರ್ನಾಟಕದ ಮೂರ್ನಾಲ್ಕು ಜಿಲ್ಲೆಗಳ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯ, ರಾಜ್ಯದ 2ನೇ ಅತೀ ದೊಡ್ಡ ಜಲಾಶಯ ಆಗಿದೆ. ಆದರೆ, ಈ ಜಲಾಶಯಕ್ಕೆ ಗ್ರಹಣ ಬಡಿದಿದೆ. ಹೂಳು ತುಂಬಿಕೊಂಡು, ಗೇಟ್ ದುರಸ್ತೆ ಮಾಡಿಸದೆ ಆ ಡ್ಯಾಂನ ಶೇಖರಣೆ ಸಾಮರ್ಥ್ಯವೇ ಕಡಿಮೆಯಾಗಿದೆ. ಕಣ್ಣ ಮುಂದೆ 20 ಟಿಎಂಸಿ ನೀರು ಹರಿದು ಹೋಗುತ್ತಿದ್ದರೂ ಅದನ್ನು ಹಿಡಿದು ಸಂಗ್ರಹಣೆ ಮಾಡಿಟ್ಟುಕೊಳ್ಳಲು ಸಾಧ್ಯವೇ ಆಗುತ್ತಿಲ್ಲ ಎಂಬ ನೋವು ಕಾಡುತ್ತಿದೆ.

ಹೌದು, ಮಧ್ಯ ಕರ್ನಾಟಕದ ರೈತರ ಜೀವನಾಡಿ ಅಂದ್ರೆ ಅದು ತುಂಗಭದ್ರಾ ಜಲಾಶಯ. ಈ ಬಾರಿ ಜೂನ್‌ನಲ್ಲೇ ಜಲರಾಶಿ ಹರಿದು ಬಂದಿದೆ..ಆದ್ರೆ ಈ ಜಲಾಶಯದ ಗೇಟ್​ನಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ಈವರೆಗೂ ಸರಿಪಡಿಸಿಲ್ಲ.. ಜಲಾಶಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೀರನ್ನು ತುಂಬಿಸಲಾಗ್ತಿಲ್ಲ.. ಕಾರಣ ಸಮನಾಂತರ ಜಲಾಶಯ ನಿರ್ಮಾಣ ಮಾಡಿಲ್ಲ. ಇಷ್ಟೇ ಅಲ್ಲಾ ಕ್ರಿಸ್ಟ್ ಗೇಟ್ ಕಿತ್ತು ಹೋಗಿ ವರ್ಷಗಳೇ ಕಳೆದರೂ ಇನ್ನೂ ಸರಿಪಡಿಸಿಲ್ಲ. ಇದು ಪ್ರಮುಖ ಕಾರಣವಾಗಿದೆ.. ಡ್ಯಾಂಗೆ 105 ಟಿಎಂಸಿ ನೀರನ್ನು ಸಂಗ್ರಹ ಮಾಡುವ ಸಾಮಾರ್ಥ್ಯವಿದ್ದರೂ, ಕೇವಲ 80 ಟಿಎಂಸಿ ಸಂಗ್ರಹ ಮಾಡಿ ಉಳಿದ ನೀರನ್ನು ಹೊರಬಿಡಲಾಗ್ತಿದೆ. ಅಂದರೆ ಒಂದು ತಿಂಗಳಿಂದ ಬರೋಬ್ಬರಿ 240 ಟಿಎಂಸಿ ನೀರನ್ನು ನದಿಗೆ ವ್ಯರ್ಥವಾಗಿ ಹರಿದುಬಿಡಲಾಗುತ್ತಿದೆ.

ಕಳೆದ ವರ್ಷ ಇದೇ ತಿಂಗಳು ತುಂಗಭದ್ರಾ ಜಲಾಶಯದ 33 ಕ್ರಿಸ್ಟ್​ ಗೇಟ್​ ಪೈಕಿ 19ನೇ ಗೇಟ್​ ನೀರಿನ ರಭಸಕ್ಕೆ ಕಿತ್ತು ಹೋಗಿತ್ತು. ಮೂವತ್ತು ಟಿಎಂಸಿ ನೀರನ್ನು ನದಿಗೆ ಬಿಟ್ಟು ತಾತ್ಕಾಲಿಕ ಸ್ಟಾಫ್​ಗೇಟ್​ ಅಳವಡಿಸೋ ಮೂಲಕ 70 ಟಿಎಂಸಿ ಉಳಿಸಲಾಗಿತ್ತು. ಆದ್ರೇ, ನೀರು ಖಾಲಿಯಾದ ಬಳಿಕ ಪರ್ಮನೆಂಟ್ ಗೇಟ್ ಕೂಡಿಸುವಲ್ಲಿ ವಿಳಂಬವಾಗಿದೆ.. ಹೀಗಾಗಿ ಈ ಬಾರಿ ಕೇವಲ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹ ಮಾಡಲಾಗಿದೆ. ಹೀಗಾಗಿ ಮಾಜಿ ಸಚಿವ ಶ್ರೀರಾಮುಲು ಸರ್ಕಾರದ ವಿರುದ್ಧ ಗುಡುಗಿದ್ದರು.

ಮುಂಗಾರು ಅವಧಿಗೂ ಮುನ್ನವೇ ಶುರುವಾಗಿದೆ. ಸುರಿದ ಮಳೆಗೆ ಜಲಾಶಯವು ಅವಧಿಗೂ ಮುನ್ನ ಭರ್ತಿಯಾಗಿತ್ತು.. ಆದ್ರೆ, ನಿರೀಕ್ಷಿತ ಮಟ್ಟದಲ್ಲಿ ನೀರು ತುಂಬಿಸದಿದ್ದಕ್ಕೆ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ.

Related Video